ಮಂಗಲ್ಪಾಡಿ ಪಂ. ವ್ಯಾಪ್ತಿಯ ವಿವಿಧ ಕಡೆ ಕಡಲ್ಕೊರೆತ ಭೀತಿ: ಕಳೆದ ವರ್ಷ ಸಮುದ್ರಪಾಲಾದ ರಸ್ತೆ ಇನ್ನೂ ನಾದುರಸ್ತಿ
ಉಪ್ಪಳ: ಮಳೆಗಾಲ ಆರಂಭಗೊಳ್ಳುತ್ತಿದ್ದoತೆ ಕಡಲ್ಕೊರೆತದ ಭೀತಿ ತೀರ ಪ್ರದೇಶದ ಜನರನ್ನು ಕಾಡುತ್ತಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಕಡಲ್ಕೊರೆತ ಉಂಟಾಗಿ ಸಮುದ್ರ ತೀರ ಪ್ರದೇಶದ ರಸ್ತೆಗಳು ಸಮುದ್ರ ಪಾಲಾಗಿತ್ತು. ಆದರೆ ಇದುವರೆಗೂ ರಸ್ತೆ ನಿರ್ಮಿಸದೆ ಇರುವುದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಪಂಚಾಯತ್‌ನ ಹನುಮಾನ್‌ನಗರ, ಶಿವಾಜಿನಗರ, ಕುದುಪುಳು, ಬಂಗ್ಲ, ಪೆರಿಂಗಡಿ, ಬೇರಿಕೆ ಸಹಿತ ವಿವಿಧ ಭಾಗಗಳಲ್ಲಿ ರಸ್ತೆಗಳು ಹಾನಿಗೊಂಡು ಸ್ಥಳೀಯ ಮೀನು ಕಾರ್ಮಿಕ ಕುಟುಂಬ ಗಳ ಸಂಚಾರಕ್ಕೆ …