ಮಾಡ ಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ನಿಧನ
ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ಜನಾರ್ದನ ಯು. (70) ನಿಧನ ಹೊಂದಿದರು. ಮಂಜಪ್ಪ- ಪೂವಮ್ಮ ದಂಪತಿ ಪುತ್ರನಾಗಿದ್ದಾರೆ. ಎಸ್‌ಎನ್‌ಡಿಪಿ, ಮಾಡ ತೀಯಾ ಸಮಾಜದ ಮುಖಂ ಡರಾಗಿದ್ದರು. ಮಾಡ ಕ್ಷೇತ್ರದಲ್ಲಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇಂದು ಮುಂಜಾನೆ ೩ ಗಂಟೆಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ನಿತಿನ್, ದೀಪಿಕ, ಅಳಿಯ ಶಿವಪ್ರಸಾದ್ ಕೊಲ್ಯ, ಸೊಸೆ ಶ್ರದ್ಧಾ, ಸಹೋದರಿಯರಾದ ಸೇಸಮ್ಮ, ಕೃಷ್ಣಮ್ಮ, ಯಮುನ ಹಾಗೂ ಅಪಾರ …