ಸೇವೆಯಿಂದ ನಿವೃತ್ತನಾಗಿ ಬೆಕ್ಕುಗಳನ್ನು ಸಂರಕ್ಷಿಸಲು ಉಪ್ಪಳದಲ್ಲಿ ಬಾಡಿಗೆಗೆ ಮನೆ ಪಡೆದ ತಿರುವನಂತಪುರ ನಿವಾಸಿ

ಉಪ್ಪಳ: ಉದ್ಯೋಗದಿಂದ ನಿವೃತ್ತರಾದ ಬಳಿಕ ತಿರುವನಂತಪುರ ನಿವಾಸಿ ಸರಕಾರಿ ಕ್ವಾರ್ಟರ್ಸ್ ತೊರೆದು ಉಪ್ಪಳದಲ್ಲಿ ಮನೆಯೊಂ ದನ್ನು ಬಾಡಿಗೆಗೆ ಪಡೆದುಕೊಂಡರು. ಈಗ ಈ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಇತರ 18 ಮಂದಿ ಮನಃಶಾಂತಿಯಿಂದ ಜೀವಿಸುತ್ತಿದ್ದಾರೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದ ಚಂದ್ರಶೇಖರನ್ ತಂಬಿ ಕಳೆದ ಫೆಬ್ರವರಿ 28ರಂದು ಸೇವೆಯಿಂದ ನಿವೃತ್ತರಾದರು. ಸೇವೆಯಿಂದ ನಿವೃತ್ತರಾದ ಬಳಿಕ ಹೆಚ್ಚಿನವರು ತಮ್ಮ ಊರಿಗೆ ತೆರಳುವುದು ಸಾಮಾನ್ಯವಾಗಿದ್ದರೂ ಇವರು ಅಂದೇ ಬಾಡಿಗೆಗೆ ಕ್ವಾರ್ಟರ್ಸ್ ಪಡೆದುಕೊಂಡು ಇಲ್ಲಿ ಉಳಿದಿದ್ದಾರೆ.  7 ವರ್ಷದ …

ತಿರುವನಂತಪುರ ಕಾರ್ಪೋರೇಶನ್ ಆಡಳಿತವನ್ನು ಜನರು ಬಿಜೆಪಿಗೆ ನೀಡಿರುವುದು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಬೇಕೆಂಬ ಉದ್ದೇಶದಿಂದ-ಸಿ.ಕೆ. ಪದ್ಮನಾಭನ್

ಕಾಸರಗೋಡು: ರಾಜ್ಯದ ರಾಜಧಾನಿಯಾದ ತಿರುವನಂತಪುರ ಕಾರ್ಪೋರೇಶನ್‌ನ ಆಡಳಿತವನ್ನು ಜನರು ಬಿಜೆಪಿಗೆ ದೊರಕಿಸಿಕೊಟ್ಟಿರು ವುದು ಕೇರಳದಲ್ಲಿ ಬಿಜೆಪಿ ಆಡಳಿತ ಬರಬೇಕೆಂಬ ಉದ್ದೇಶದಿಂದಾಗಿದೆ. ರಾಜಧಾನಿ ನಗರದ ಜನರ ಆಗ್ರಹವನ್ನು ಸಾರ್ಥಕಗೊಳಿಸಲು ಕಾಸರಗೋಡು  ಸಹಿತ ಕೇರಳದಾದ್ಯಂತದ ಮತದಾರರಿಗೆ ಸಾಧ್ಯವಾಗಲಿದೆ ಯೆಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್  ತಿಳಿಸಿದರು. ನವೀಕರಿಸಿದ ಕಾಸರಗೋಡು ಬಿಜೆಪಿ ಜಿಲ್ಲಾ ಕಮಿಟಿ ಕಚೇರಿ,ಎನ್‌ಡಿಎ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಹಾಗೂ ಶಕ್ತಿ ಕೇಂದ್ರ ಇನ್‌ಚಾರ್ಜ್ ರವರುಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿಪಿಎಂ ಹಾಗೂ  ಸಚಿವ ಸಂಪು …

ಯುವಸಮಾಜ ದಾರಿ ತಪ್ಪದಂತೆ ಪೋಷಕರು ಎಚ್ಚರವಹಿಸಬೇಕು- ಎಡನೀರುಶ್ರೀ

ಬದಿಯಡ್ಕ: ಧರ್ಮಜೀವನ ಪದ್ಧತಿಯನ್ನು ರೂಢಿಸಿಕೊಂಡು ನಾವು ಮುನ್ನಡೆಯಬೇಕು. ಪ್ರಸ್ತುತ ಬದಲಾವಣೆಯ ಕಾಲಗತಿಯಲ್ಲಿ ಅಸ್ಥಿರತೆ ಸಹಜ ಆದರೆ ಅದನ್ನು ಒಗ್ಗೂಡಿಸುವುದೆ ಸಮಾಜೋತ್ಸವದ ಉದ್ದೇಶ. ಯುವ ಸಮಾಜ ಪಾಶ್ಚಾತ್ಯ ಸಂಸ್ಕೃತಿ ಸಂಸ್ಕಾರಗಳಿAದ ದಾರಿ ತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಅನ್ಯ ಧರ್ಮೀಯರು ನಮ್ಮ ದೌರ್ಬಲ್ಯ ಗಳನ್ನು ಉಪಯೋಗಿಸಿಕೊಂಡು ಆಕ್ರಮಣವನ್ನು ಮಾಡುತ್ತಿರುವುದು ಖಂಡನೀಯ ಎಂದವರು ನುಡಿದರು.ಬದಿಯಡ್ಕ ಶ್ರೀ ಭಾರತೀ ನಗರ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ವಿರಾಟ್ ಹಿಂದೂ ಸಮಾ ಜೋತ್ಸವದಲ್ಲಿ …

ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರ ಛಾಯಾಚಿತ್ರ ಪ್ರತಿಷ್ಠೆ

ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಮಂದಿರ ಧಾರ್ಮಿಕ ಶ್ರದ್ಧೆಗೆ ನೀಡಿದ ಕೈಗನ್ನಡಿ. ಮಂದಿರ, ದೇವಸ್ಥಾನ, ಶಾಲೆಗಳು ಸರಿಯಾಗಿದ್ದರೆ ಪೂರ್ಣ ಜನರು ಸಂಸ್ಕಾರವಂತರಾಗುತ್ತಾರೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ಅವರು ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಸದಸ್ಯೆ …

ಉಪ್ಪಳ ಅಗ್ನಿಶಾಮಕದಳ ಕೇಂದ್ರ ನೂತನ ಕಟ್ಟಡ ಉದ್ಘಾಟನೆ 5ರಂದು

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದಲ್ಲಿ 1.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪ್ಪಳ ಅಗ್ನಿ ಶಾಮಕ ಮತ್ತು ರಕ್ಷಣಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.5ರಂದು ಅಪರಾಹ್ನ 3.30ಕ್ಕೆ ಜರಗಲಿದೆ. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‌ಲೈನ್‌ನಲ್ಲಿ ಉದ್ಘಾಟಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ, ಅಗ್ನಿ ಶಾಮಕದಳ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾಮಾಜಿಕ, ರಾಜಕೀಯ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಭಾಗವಹಿಸುವರು.

ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಆರಂಭ

ಕುಂಬ್ಡಾಜೆ: ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಭಾನುವಾರ ಬೆಳಿಗ್ಗೆ ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡಿತು. ಉಗ್ರಾಣ ಮುಹೂರ್ತ, ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಶಾಂತಿಹೋಮ, ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ ಜರಗಿತು. ಸಂಜೆ 7ರಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ಗಳು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 6.30ರಿಂದ ನಂದನ್ ಶರ್ಮ ಪಂಜಿತ್ತಡ್ಕ, ಇಶಾನಿ …

ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್ ಕಾಮಗಾರಿ ಉದ್ಘಾಟನೆ

ದೇಲಂಪಾಡಿ: ದೇಲಂಪಾಡಿ ಪಂಚಾಯತ್‌ನ ಸಾಲತ್ತಡ್ಕ ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್‌ನ ಪುನರ್ ನಿರ್ಮಾಣಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮಂಜೂರು ಮಾಡಿದ ಎರಡೂವರೆ ಕೋಟಿ ರೂ.ಗಳ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಸಿ.ಎಚ್. ಕುಂಞಂಬು ನೆರವೇರಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಿದರು. ಮೈನರ್ ಇರಿಗೇಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅನೂಪ್ ಕುಮಾರ್ ವರದಿ ಮಂಡಿಸಿದರು. ಪಂ. ಉಪಾಧ್ಯಕ್ಷೆ ಬಿ. ಶಾರದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತನ್ ಕುಮಾರ್, ಸೈರಾ ಎ.ಬಿ. ಬಶೀರ್, ಕಾರಡ್ಕ ಬ್ಲೋಕ್ ಪಂ. …

ಮಲ್ಲ ಕ್ಷೇತ್ರದ ಅರ್ಚಕ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ವಿಟ್ಲ ನಿವಾಸಿಯೂ, ಕ್ಷೇತ್ರದ ಅಧೀನತೆಯ ಲ್ಲಿರುವ ಕಟ್ಟಡದಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದ ಬಿ. ಅನಂತಕೃಷ್ಣ ಭಟ್ (49) ಮೃತಪಟ್ಟ ವ್ಯಕ್ತಿ. ೨೭ ವರ್ಷಗಳ ಹಿಂದೆ ಇವರು ಮಲ್ಲ ಕ್ಷೇತ್ರದಲ್ಲಿ ಅರ್ಚಕನಾಗಿ ಕೆಲಸಕ್ಕೆ ಸೇರಿದ್ದರೆಂದು ಸಹೋದರ ತಿಳಿಸಿದ್ದಾರೆ. ನಿನ್ನೆ ಸಂಜೆ ಕ್ಷೇತ್ರದಲ್ಲಿ  ಪೂಜೆ ಕಾರ್ಯಕ್ಕೆ ಇವರು ತಲುಪಬೇಕಾಗಿತ್ತು. ಆದರೆ ನಾಪತ್ತೆಯಾದ ಹಿನ್ನೆಲೆಯಲ್ಲಿ ನೌಕರರು ವಾಸಸ್ಥಳಕ್ಕೆ ತಲುಪಿದರೂ  ಪತ್ತೆಯಾಗಲಿಲ್ಲ. ಬಳಿಕ ಸಿಸಿ ಟಿವಿ ಕ್ಯಾಮರಾಗಳ …

ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ನಿಧನ

ಉಪ್ಪಳ: ಮೂಲತ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ನಿವಾಸಿಯೂ ಇದೀಗ ಬೆಂಗಳೂರಿನಲ್ಲಿ ವಾಸವಾಗಿರುವ ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ಇಚ್ಲಂ ಗೋಡು (95) ಬೆಂಗಳೂರಿ ನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಇವರು ಉಪ್ಪಳ ಸರಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಅಲ್ಲದೆ ಮಂಜೇಶ್ವರ-ಉಪ್ಪಳ ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ರಾಜೀವಿ .ಎಸ್ ಆಳ್ವ, ಮಕ್ಕಳಾದ ಸುಧಿ ರಂಜನ್ , ಗೀತಾ ಅಶೋಕ ಹಾಗೂ ಅಪಾರ ಬಂಧು ಬಳಗವನ್ನು …

ಹೆರಿಗೆ ಬಳಿಕ ರಕ್ತಸ್ರಾವ: ಯುವತಿ ಮೃತ್ಯು

ಬದಿಯಡ್ಕ: ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದಿಂದಾಗಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸಹಕಾರಿ ಇಲಾಖೆ ಜೂನಿಯರ್ ಅಡಿಟರ್ ಮಾವಿನಕಟ್ಟೆಯ ಟಿ. ನಳಿನಾಕ್ಷಿ (42) ಮೃತಪಟ್ಟ ಯುವತಿ. ಇವರು ಅರವತ್ ಕುದಿರಕ್ಕೋಡ್‌ನ ರಾಘನ್‌ರ ಪತ್ನಿಯಾಗಿದ್ದಾರೆ. ಫೆ. 24ರಂದು  ನಳಿನಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದ ಹಿನ್ನೆಲೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ನಳಿನಾಕ್ಷಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ರಕ್ತಸ್ರಾವ ಹಾಗೂ ಬಳಿಕ ಉಂಟಾದ ಹೃದಯಾಘಾ ತವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಇದು ನಳಿನಾಕ್ಷಿಯ ಮೂರನೇ ಹೆರಿಗೆಯಾಗಿದೆ. ಇವರಿಗೆ …