ಶಾಲಾ ಮಕ್ಕಳ ಗೋಡೆ ಹಾರಾಟ ಅಪಾಯಕ್ಕೆ ಸಾಧ್ಯತೆ: ಕುಂಬಳೆ ಮಾವಿನಕಟ್ಟೆಯಲ್ಲಿ ಕಾಲ್ನಡೆ ಮೇಲ್ಸೇತುವೆ ಬೇಕೆಂಬ ಬೇಡಿಕೆ
ಕುಂಬಳೆ: ವಿವಿಧ ಕಡೆಗಳಲ್ಲಿ ಫೂಟ್‌ಓವರ್ ಬ್ರಿಡ್ಜ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವಾಗ, ಅನುಮತಿ ನೀಡುತ್ತಿರುವಾಗ ಮಾವಿನಕಟ್ಟೆಯನ್ನು ಅವಗಣಿ ಸುತ್ತಿರುವುದಾಗಿ ಸ್ಥಳೀಯರು ಸೂಚಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ತಲಪಾಡಿ- ಚೆಂಗಳ ರೀಚ್‌ನಲ್ಲಿ 10ರಷ್ಟು ಸ್ಥಳಗಳಲ್ಲಿ ಹೊಸತಾಗಿ ಮೇಲ್ಸೇತುವೆ ಮಂಜೂರುಗೊಳಿಸಿ ಸೂಚನೆ ಲಭಿಸಿತ್ತು. ಕುಂಬಳೆ ಮಾವಿನಕಟ್ಟೆಯಲ್ಲಿ ಮಸೀದಿ, ಸಮೀಪದಲ್ಲೇ ಶಿಕ್ಷಣ ಸಂಸ್ಥೆಗಳು ಎಲ್ಲ ಇರುವಾಗ ಇಲ್ಲಿ ಅಂಡರ್ ಪಾಸ್ ಅನಿವಾರ್ಯವಾಗಿತ್ತು. ಇಲ್ಲಿ ಅಂಡರ್‌ಪಾಸ್‌ಗೆ ಸಮಾನ ವಾದ ರೀತಿಯಲ್ಲಿ ಕಲ್ವರ್ಟ್ ನಿರ್ಮಿಸುವಾಗ ಅದು ಕಾಲ್ನಡೆ ಪ್ರಯಾಣಿಕರಿಗೆ ಪ್ರಯೋಜನವಾ ಗುವ ರೀತಿಯಲ್ಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಆದರೆ …