ಕೆಜೆಎಂ ರಸ್ತೆ ಪುನರುದ್ಧಾರಕ್ಕೆ ಶಾಸಕರ  ನಿಧಿಯಿಂದ 97 ಲಕ್ಷ ರೂ. ಮಂಜೂರು

ಮಂಜೇಶ್ವರ: ಶೋಚನೀಯ ಸ್ಥಿತಿಯಲ್ಲಿದ್ದ ಕೆಜೆಎಂ ರಸ್ತೆಯ ಪುನರುದ್ಧಾರ ಕಾಮಗಾರಿಗೆ ಶಾಸಕರ ನಿಧಿಯಿಂದ 97 ಲಕ್ಷ ರೂ. ಮಂಜೂರು ಮಾಡಲಾಗಿದೆ. ಸ್ಥಳೀಯರ ಬಹುಕಾಲದ ಬೇಡಿಕೆಗೆ ಪರಿಹಾರ ಉಂಟಾಗಿದೆ. ರಸ್ತೆಯ ಕಾಮಗಾರಿ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು. ಈ ವೇಳೆ ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಸೈಫುಲ್ಲ ತಂಙಳ್, ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ, ಉಪಾಧ್ಯಕ್ಷೆ ಫಾತಿಮತ್ ಸುಹ್ರ, ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಅಣ್ಣಿ, ಸದಸ್ಯ ಮುಕ್ತಾರ್, ಇಲ್ಯಾಸ್ ತೂಮಿನಾಡು, ಹಾಮಿದ್ ತಂಙಳ್, ಹಮೀದ್ …

ಪೈವಳಿಕೆಯಲ್ಲಿ ಹುತಾತ್ಮ ಸಹೋದರರ ಸಂಸ್ಮರಣೆ

ಪೈವಳಿಕೆ: ಭೂಮಾಲಿಕರ ದಬ್ಬಾಳಿಕೆ ವಿರುದ್ಧ ಹೋರಾಡಿ ಜೀವ ಕಳೆದು ಕೊಂಡ ಪೈವಳಿಕೆ ನಿವಾಸಿಗಳಾದ ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಸಹೋದರರ ಹುತಾತ್ಮ ಸಂಸ್ಮರಣೆ ವಾರ್ಷಿಕ ಕಾರ್ಯಕ್ರಮವನ್ನು ಪೈವಳಿಕೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕೆ. ಅನಿಲ್ ಕುಮಾರ್ ಉದ್ಘಾಟಿಸಿದರು. ೬೮ನೇ ಹುತಾತ್ಮ ದಿನಾಚರಣೆ ಅಂಗವಾಗಿ ಪೈವಳಿಕೆ ಪೇಟೆಯಲ್ಲಿ ಮೆರವಣಿಗೆ, ಸಂಸ್ಮರಣೆ ಸಮ್ಮೇಳನ ನಡೆಸಲಾಯಿತು. ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸೆಕ್ರಟರಿ ಯೇಟ್ ಸದಸ್ಯ ಕೆ.ಆರ್. ಜಯಾನಂದ, ಜಿಲ್ಲಾ ಸಮಿತಿ …

ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ತಲಪಾಡಿಗೆ ಸ್ಥಳಾಂತರಿಸಲು ಸಿದ್ಧತೆ

ಮಂಜೇಶ್ವರ: ಹೊಸಂಗಡಿ ಬಳಿಯ ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ನ್ನು ತಲಪಾಡಿಗೆ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗು ತ್ತಿದೆ. ಹಲವಾರು ವರ್ಷಗಳಿಂದ ವಾಮಂಜೂರಿನಲ್ಲಿ ಚೆಕ್‌ಪೋಸ್ಟ್ ಕಚೇರಿ ಕಂಟೈನರ್‌ನಲ್ಲಿ ಕಾರ್ಯಾ ಚರಿಸುತ್ತಿದೆ. ಆದರೆ ಕಚೇರಿಗೆ ಸ್ವಂತ ಕಟ್ಟಡ, ಶೌಚಾಲಯ, ವಾಸಮಾಡಲು ವ್ಯವಸ್ಥೆ ಇಲ್ಲದೆ ಉದ್ಯೋಗಸ್ಥರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪರಿಸರದ ಬಾಡಿಗೆ ಕ್ವಾರ್ಟರ್ಸ್ನಲ್ಲಿ ಉದ್ಯೋಗಸ್ಥರು ವಾಸವಾಗಿದ್ದಾರೆ. ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ವಾಸ ಸ್ಥಳಕ್ಕೆ ಹೊಸಂಗಡಿ ಮೂಲಕ ಒಂದು ಕಿಲೋ ಮೀಟರ್ ಸುತ್ತು ವರಿದು ತೆರಳಬೇಕಾಗುತ್ತಿದೆ. ವಾಹನ ತಪಾಸಣೆ ಹೆದ್ದಾರಿಯಲ್ಲಿಯೇ ನಡೆಸಬೇಕಾಗುತ್ತಿದ್ದು ಹೆದ್ದಾರಿ …

ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದು ಕಾರು ಸಹಿತ ತಂಡ ಪರಾರಿ

ಕುಂಬಳೆ: ಬಂದ್ಯೋಡಿನಲ್ಲಿ ವ್ಯಾಪಾರಿಯನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಳಿಕ ಅವರ ಕಾರನ್ನು ತಂಡ ಅಪಹರಿಸಿರುವುದಾಗಿ ದೂರಲಾಗಿದೆ.  ವ್ಯಾಪಾರಿಯ ಐಫೋನ್‌ನ್ನು ತಂಡ ಕಸಿದುಕೊಂಡಿದೆ.  ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ಸಂಸ್ಥೆ ನಡೆಸುವ ಮಳ್ಳಂಗೈಯ ಅಲಿ ಮುಕ್ತಾದ್ (34)ರ ಮೇಲೆ ತಂಡ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನದ ಸಮೀಪ ಘಟನೆ ನಡೆದಿದೆ. ಅಲಿ ಮುಕ್ತಾದ್ ಬಂದ್ಯೋಡಿನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು.ಗುರ್ಮೆಗೆ ತಲುಪಿದಾಗ …

ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೈಗೊಂಡ ಟ್ರಾಫಿಕ್ ಪರಿಷ್ಕಾರ ಉಲ್ಲಂಘನೆ-ಆರೋಪ ;  ಖಾಸಗಿ ಬಸ್ ನೌಕರರಿಂದ ಮುಷ್ಕರ ಮುನ್ನೆಚ್ಚರಿಕೆ

ಕುಂಬಳೆ: ಇತ್ತೀಚೆಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಎಎಸ್‌ಪಿ, ಆರ್‌ಟಿಒ, ಪಂಚಾಯತ್ ಜನಪ್ರತಿ ನಿಧಿಗಳು, ಬಸ್ ಕಾರ್ಮಿಕರು,  ಸಂಘಟನೆಗಳ ನೇತಾರರು ಸೇರಿ ಕೈಗೊಂಡ ಟ್ರಾಫಿಕ್ ಪರಿಷ್ಕಾರವನ್ನು  ಇದೀಗ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ   ಉಲ್ಲಂಘಿಸಿದೆಯೆಂದು ಬಸ್ ನೌಕರರು  ಆರೋಪಿಸುತ್ತಿದ್ದಾರೆ.   ಬದಿಯಡ್ಕ, ಪೆರ್ಲ ಸಹಿತ ಸೀತಾಂಗೋಳಿ ಭಾಗದಿಂದ ಕುಂಬಳೆಗೆ ತಲುಪುವ ಖಾಸಗಿ ಬಸ್‌ಗಳನ್ನು  ಪ್ರಸ್ತುತ ಸ್ಥಳದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದರ ಬದಲು ಬಸ್‌ಗಳನ್ನು ಕುಂಬಳೆಯ ಹಳೆ ಬಸ್ ನಿಲ್ದಾಣಕ್ಕೆ ಕೊಂಡೊಯ್ದು ಪ್ರಯಾಣಿಕರನ್ನು ಇಳಿಸುವಂತೆ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ ಸಿಐಗೆ  ಸೂಚಿಸಿರುವುದಾಗಿ ಹೇಳಲಾಗುತ್ತಿದೆ. …

ಕೆಲಸ ಭರವಸೆ ನೀಡಿ ಕರ್ನಾಟಕ ನಿವಾಸಿ ಯುವತಿಯನ್ನು ಅಂಬಲತ್ತರಕ್ಕೆ ಕರೆತಂದು ಮಾನಭಂಗ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಕರ್ನಾಟಕ ನಿವಾಸಿ ಯುವತಿಯನ್ನು ಅಂಬಲತ್ತರಕ್ಕೆ ಕರೆತಂದು ಮಾನಭಂಗ ಗೈದಿರುವು ದಾಗಿ ದೂರಲಾಗಿದೆ. ೩೦ರ ಹರೆಯದ ಯುವತಿ ನೀಡಿದ ದೂರಿನಂತೆ ಇರಿಯದ ಬಶೀರ್, ಪಳ್ಳಿಕೆರೆಯ ಆಶಿಕ್ ಎಂಬಿವರ ವಿರುದ್ಧ ಅಂಬಲತ್ತರ ಪೊಲೀಸರು ಕೇಸು ದಾಖಲಿಸಿದ್ದಾರೆ. ಜನವರಿ, ಮಾರ್ಚ್ ತಿಂಗಳುಗಳಲ್ಲಿ ಪ್ರಕರಣಕ್ಕೆ ಆಸ್ಪದವಾದ ಘಟನೆ ಜರಗಿದೆ. ಕೆಲಸ ನೀಡುವುದಾಗಿ ತಾಯಿಗೆ ಭರವಸೆ ಕೊಟ್ಟು ಆರೋಪಿಗಳಲ್ಲಿ ಓರ್ವ ಯುವತಿಯನ್ನು ಜೊತೆಗೆ ಕರೆದುಕೊಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಅದರ ಬಳಿಕ ಅಂಬಲತ್ತರಕ್ಕೆ ಕೊಂಡೊಯ್ದು ಒಂದು ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ …

ಸ್ಕೂಟರ್ ಅಪಘಾತಕ್ಕೀಡಾಗಿ ಯುವಕ ದಾರುಣ ಮೃತ್ಯು

ಮಂಜೇಶ್ವರ:  ವಾಮಂಜೂರು ಚೆಕ್ ಪೋಸ್ಟ್ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ  ಮಗುಚಿಬಿದ್ದು ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ. ಕರ್ನಾಟಕದ ಬೆಳ್ತಂಗಡಿ ನಿವಾಸಿಯೂ ಮಂಗಳೂರಿನಲ್ಲಿ ಕೆಫೆ ನೌಕರನಾಗಿರುವ  ಬಾತಿಷ (25) ಮೃತಪಟ್ಟ ದುರ್ದೈವಿ. ಇಂದು ಮುಂಜಾನೆ 3 ಗಂಟೆಗೆ ವಾಮಂಜೂರು ಚೆಕ್ ಪೋಸ್ಟ್  ಟರ್ಫ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವುಂಟಾಗಿದೆ. ಸ್ನೇಹಿತನೊಂದಿಗೆ ಕಾಸರಗೋಡು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ  ಸ್ಕೂಟರ್ ಸ್ಕಿಡ್ ಆಗಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಬಾತಿಷರನ್ನು ಸ್ಥಳೀಯರು ಕೂಡಲೇ …

ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕಾಸರಗೋಡು:  ತೈಕಡಪ್ಪುರದ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನಾಪತ್ತೆಯಾದ ಅಜ್ಮಲ್ ಎಂಬ ಯುವಕನ ಮೃತದೇಹ ಪತ್ತೆಯಾಗಿದೆ. ತೈಕಡಪ್ಪುರದಿಂದ  ಇಂದು ಬೆಳಿಗ್ಗೆ ಮೀನುಗಾರಿಕೆಗಾಗಿ ಹೋದ   ಮೀನು ಕಾರ್ಮಿಕರು ಅಳಿವೆ ಬಾಗಿಲು ಸಮೀಪ ಸಮುದ್ರದಲ್ಲಿ ತೇಲುತ್ತ್ತಿದ್ದ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ವಿಷಯವನ್ನು ಕರಾವಳಿ ಪೊಲೀಸರಿಗೆ ತಿಳಿಸಲಾಯಿತು.  ಪೊಲೀಸರ ನಿರ್ದೇಶ ಪ್ರಕಾರ  ಮೀನು ಕಾರ್ಮಿಕರು ತಮ್ಮ  ಬೋಟ್‌ನಲ್ಲಿ ಮೃತದೇಹವನ್ನು ದಡಕ್ಕೆ ತಲುಪಿಸಿದ್ದಾರೆ. ಮೃತದೇಹವನ್ನು ಕಾಞಂಗಾಡ್‌ನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಕಳೆದ ಶನಿವಾರ ಸಂಜೆ ತೈಕಡಪ್ಪುರ ಸ್ಟೋರ್ ಕವಲ ಎವಿ ಹೌಸ್‌ನ …

ಕಾರು- ಬೈಕ್ ಢಿಕ್ಕಿ: ಸವಾರ ಗಂಭೀರ ಗಾಯ

ಮಂಜೇಶ್ವರ: ವೈದ್ಯರು ಚಲಾಯಿಸುತ್ತಿದ್ದ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತೂಮಿನಾಡು ಸರ್ವೀಸ್ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ತಲ ಪಾಡಿ ಭಾಗದಿಂದ ಡಾ. ಜಯಪಾಲ್ ಶೆಟ್ಟಿ ಚಲಾಯಿಸುತ್ತಿದ್ದ ಕಾರು ಹಾಗೂ ಕುಂಜತ್ತೂರು ಭಾಗದಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಇದರಿಂದ ಬೈಕ್ ಸವಾರ ಕುಂಜತ್ತೂರು ನಿವಾಸಿ ನಿಯಾಸ್ ಗಂಭೀರ ಗಾಯ ಗೊಂಡಿದ್ದು, ಅವರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಅಪಘಾತದಲ್ಲಿ ಕಾರು …

ಎಂಡಿಎಂಎ ಸಾಗಾಟ: ಅಂತಾರಾಷ್ಟ್ರೀಯ ಮಾದಕದ್ರವ್ಯ ದಂಧೆಯ ವಿದೇಶಿ ಪ್ರಜೆ ಸೇರಿದಂತೆ ಇಬ್ಬರ ಸೆರೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಿಂದ ಇತ್ತೀಚೆಗೆ ಪೊಲೀಸರು ೧೩೯.೨೯ ಗ್ರಾಂ ಮಾದಕದ್ರವ್ಯವಾದ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಘಾನಾ ನಿವಾಸಿ ವಿಕ್ಟರ್ ದಸಾಬೆ (37) ಹಾಗೂ ಗುಜರಾತ್ ಅಹಮ್ಮದಾಬಾದ್ ಲ್ಯಾಂಬ ನಿವಾಸಿ ಹಾಗೂ ಈಗ ಪಶ್ಚಿಮ ಬಂಗಾಳ ಹೌರ ಜಿಲ್ಲೆಯ ನರೇಂದ್ರ ಪುಟ್‌ನಲ್ಲಿ ವಾಸಿಸುತ್ತಿರುವ ರಿಯಾಖಾನ್ ಅಲಿಯಾಸ್ ಸಾಥಿ ಶೇಖ್ (31) ಬಂಧಿತ ಆರೋಪಿಗಳು. ಇವರನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ …