ಕಾಸರಗೋಡು: ಹಣ ನೀಡದಿದ್ದರೆ ನಗ್ನ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವು ದಾಗಿ ಬೆದರಿಕೆಯೊಡ್ಡಿ ಹಣ ಪಡೆಯಲು ಯತ್ನಿಸಿದ ಘಟನೆಯಲ್ಲಿ ಕೇಸು ದಾಖಲಿಸಲಾಗಿದೆ. ನೀಲೇಶ್ವರ ಪಳ್ಳಿಕೆರೆ ನಿವಾಸಿಯಾದ 63ರ ಹರೆಯದ ವ್ಯಕ್ತಿ ನೀಡಿದ ದೂರಿನಂತೆ ಆಲಕ್ಕೋಡ್ ನಿವಾಸಿ ಕೆ.ಕೆ. ನಾರಾಯಣ (69)ನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
೯ ತಿಂಗಳ ಹಿಂದೆ ಎರ್ನಾಕುಳಂನ ಒಂದು ಹೋಟೆಲ್‌ನಲ್ಲಿ ೬೩ರ ವ್ಯಕ್ತಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಆತ ತಿಳಿಯದಂತೆ ಆರೋಪಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದನು. ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಪಡಿಸುವುದಾಗಿಯೂ, ಹಾಗೆ ಮಾಡದಿರಬೇಕಿದ್ದರೆ 2 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿ ಆರೋಪಿ ಬೆದರಿಕೆಯೊಡ್ಡಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಹಣ ನೀಡದ ಹಿನ್ನೆಲೆಯಲ್ಲಿ ಈ ದೃಶ್ಯಗಳನ್ನು ಇನ್ನೋರ್ವರಿಗೆ ಕಳುಹಿಸಿಕೊಟ್ಟಿರು ವುದಾಗಿಯೂ, ಅದರಿಂದ ತನಗೆ ಮಾನಹಾನಿ ಉಂಟಾಗಿರುವುದಾಗಿಯೂ ಪಳ್ಳಿಕ್ಕೆರೆ ನಿವಾಸಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ನೀಲೇಶ್ವರ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.






