ಕಾಡಗಂ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಕಾರ್ಯದರ್ಶಿ ನಿಧನ

ಮುಳ್ಳೇರಿಯ: ಕಾಡಗಂ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ಕಾರಡ್ಕ ಶಾಲೆ ನಗರ ನಿವಾಸಿ ಕಾನಕೋಡ್ ಪಿ. ದಾಮೋದರನ್ ನಾಯರ್ (72) ನಿಧನ ಹೊಂದಿದರು. ಮೃತರು ಪತ್ನಿ ರುಕ್ಮಿಣಿ (ಆರ್‌ಡಿ ಏಜೆಂಟ್), ಮಕ್ಕಳಾದ ಪ್ರಸಾದ್ (ಶಾರ್ಜಾ), ಪ್ರಸೀನ, ಅಳಿಯ ರಾಜೇಶ್, ಸೊಸೆ ಶ್ರೀಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಕೃಷಿಕ ನಿಧನ

ವರ್ಕಾಡಿ: ಕೊಡ್ಲಮೊಗರು ಪಜ್ವ ನಿವಾಸಿ ಹಿರಿಯ ಕೃಷಿಕ ಧೂಮಪ್ಪ ಬೆಳ್ಚಾಡ (69) ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಸುಕುಮಾರ್, ಚಂದ್ರಶೇಖರ, ಸೊಸೆಯಂದಿರಾದ ರಜತಾ, ಭವ್ಯ, ಸಹೋದರ ಸಹೋದರಿಯರಾದ ಪದ್ಮನಾಭ, ದಾಮೋದರ, ಗಿರಿಜಾ, ಸೀತಮ್ಮ, ಹೇಮಾವತಿ, ದೇವಕಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ತೀಯಾ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಪಾವೂರು ಸಂತಾಪ ಸೂಚಿಸಿದ್ದಾರೆ.

ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

ಮಂಜೇಶ್ವರ: ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೊ ಆಪರೇಟಿವ್  ಸೊಸೈಟಿಯ 2024 -25ನೇ ಸಾಲಿನ ವಾರ್ಷಿಕ ಮಹಾಸಭೆಯು ವಿಶ್ವ ಪ್ರಭ ಸಭಾಂಗಣದಲ್ಲಿ ನಡೆಯಿತು. ಸೊಸೈಟಿಯ ಅಧ್ಯಕ್ಷ ವಿಶ್ವನಾಥ ಕುದುರು ಅಧ್ಯಕ್ಷತೆ ವಹಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 60ಶೇ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನ ಮತ್ತು ಫಲಕಗಳನ್ನು ನೀಡಿ ಗೌರವಿಸಲಾಯಿತು. ಸೊಸೈಟಿಯ ಹಿರಿಯ ಹಾಗೂ ಅತ್ಯುತ್ತಮ ಕೃಷಿ ಹಾಗೂ ಇನ್ನಿತ ಕ್ಷೇತ್ರಗಳಲ್ಲಿ ಗುರುತಿಸಲ್ಪಟ್ಟ ಸದಸ್ಯರನ್ನು ಶಾಸಕ ಸಿ.ಎಚ್. ಕುಞಂಬು ಗೌರವಿಸಿದರು. ಸೊಸೈಟಿ ಕಾರ್ಯದರ್ಶಿ ರವೀಂದ್ರ ಮಡ್ವ …

ವ್ಯಾಪಕಗೊಂಡಿರುವ ಬೀದಿ ನಾಯಿಗಳು: ಪಾದಚಾರಿಗಳಲ್ಲಿ ಭೀತಿ

ಉಪ್ಪಳ: ಬೀದಿ ನಾಯಿಗಳ ಉಪಟಳದಿಂದ ಪಾದಚಾರಿಗಳಲ್ಲಿ ಭೀತಿ ಸೃಷ್ಟಿಯಾಗಿದೆ. ಉಪ್ಪಳ, ಹೊಸಂಗಡಿ ಪೇಟೆ, ಸೋಂಕಾಲು, ಬೇಕೂರು ಸಹಿತ ಒಳಪ್ರದೇಶಗ ಳಲ್ಲಿಯೂ ಬೀದಿ ನಾಯಿಗಳು ಹೆಚ್ಚಾಗಿದ್ದು, ಇದರಿಂದ ನಡೆದು ಹೋಗುವವರಿಗೆ ಭೀತಿ ಉಂಟಾಗಿದೆ. ಗುಂಪು ಗುಂಪಾಗಿ ಪರಸ್ಪರ ಕಚ್ಚಾಡಿ ನಡೆದು ಹೋಗುವ ಜನರನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಬೀದಿ ನಾಯಿಗಳು ಬೆನ್ನಟ್ಟುತ್ತಿರುವುದು ವ್ಯಾಪಕಗೊಂಡಿರುವುದಾಗಿ ದೂರಲಾಗಿದೆ. ಶಾಲಾ ಮಕ್ಕಳಲ್ಲಿ ಆತಂಕ ಹೆಚ್ಚಿದೆ. ಅಲ್ಲದೆ ರಸ್ತೆಯಲ್ಲಿ ವಾಹನಗಳ ಎದುರಿನಿಂದ ಅಡ್ಡದಿಡ್ಡಿಯಾಗಿ ಅಲೆದಾಡುತ್ತಿರುವುದರಿಂದ ಅಪಘಾತಕ್ಕೂ ಕಾರಣವಾಗುತ್ತಿದೆ. ಇತ್ತೀಚೆಗೆ ವರ್ಕಾಡಿ ಪುರುಷಂಗೋಡಿಯಲ್ಲಿ ಬಾಲಕನಿಗೆ, …

ಉಪಜಿಲ್ಲಾ ವಿಜ್ಞಾನಮೇಳ: ಲಾಂಛನ ಬಿಡುಗಡೆ

ಎಡನೀರು : ಕಾಸರಗೋಡು ಉಪಜಿಲ್ಲಾ ಶಾಲಾ ವಿಜ್ಞಾನ ಮೇಳದ ಲಾಂಛನವನ್ನು ಎಡನೀರು ಸ್ವಾಮೀ ಜೀಸ್ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಚೆಂಗಳ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ ಬಿಡುಗಡೆಗೊಳಿ ಸಿದರು. ವಿದ್ಯಾರ್ಥಿಗಳಿಂದ ಲಾಂಛನ ಆಹ್ವಾನಿಸಲಾಗಿತ್ತು. ಇವುಗಳಲ್ಲಿ ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಮಹಮ್ಮದ್ ಹನಾನ್ ರಚಿಸಿದ ಲಾಂಛನ ಆಯ್ಕೆಯಾಗಿದೆ. ಬಿಡುಗಡೆ ಸಮಾರಂಭದಲ್ಲಿ ಚೆಂಗಳ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಲೀಂ ಎಡನೀರು, ಕೆ ಎನ್. ಪ್ರಭಾಕರನ್, ಅಧ್ಯಕ್ಷ ಸಜಿ, ಪ್ರವೀಣ್ …

ತೆರಿಗೆ ವಂಚಿಸಿ ವಿದೇಶ ನಿರ್ಮಿತ ಕಾರುಗಳ ಸಾಗಾಟ:  ತನಿಖೆಗಾಗಿ ಎನ್‌ಐಎ ಕಾಸರಗೋಡಿಗೆ

ಕಾಸರಗೋಡು: ತೆರಿಗೆ ವಂಚಿಸಿ   ವಿದೇಶ ನಿರ್ಮಿತ ಆಡಂಬರ ಕಾರುಗಳನ್ನು ಸಾಗಾಟ ನಡೆಸಿದ ಪ್ರಕರಣದ ತನಿಖೆಗಾಗಿ ಎನ್‌ಐಎ ಕಾಸರ ಗೋಡಿಗೂ ಬರಲಿದೆ. ಕಾರು ಸಾಗಿಸಿದ ತಂಡದಲ್ಲಿ ಕಾಸರಗೋಡು ನಿವಾಸಿಯಾದ ಓರ್ವ ಇದ್ದಾನೆಂಬ ಸೂಚನೆಗಳ ಹಿನ್ನೆಲೆಯಲ್ಲಿ ಎನ್‌ಐಎ ಇಲ್ಲಿಗೆ ಬರಲಿದೆಯೆಂದು ತಿಳಿದುಬಂದಿದೆ. ಕಾಸರಗೋಡು ನಿವಾಸಿ ಮಲಪ್ಪುರಂ ಕೇಂದ್ರೀಕರಿಸಿ ಕಾರ್ಯಾ ಚರಿಸುವ ಸಂಘದ ಸದಸ್ಯನಾಗಿದ್ದಾನೆಂದು ಹೇಳಲಾಗುತ್ತಿದೆ. ಪ್ರಸ್ತುತ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ‘ಆಪರೇಶನ್ ನುಂಖೂರ್’ ಎಂಬ ಹೆಸರಲ್ಲಿ ಕಸ್ಟಮ್ಸ್ ಇತ್ತೀಚೆಗೆ ನಡೆಸಿದ ತನಿಖೆಯಲ್ಲಿ  ತೆರಿಗೆ ವಂಚಿಸಿ ನೇಪಾಳ ಮೂಲಕ …

ಯುವತಿ ನಾಪತ್ತೆ: ತನಿಖೆ ಆರಂಭ

ಕುಂಬಳೆ: ಕಟ್ಟತ್ತಡ್ಕ ಮುಗುರೋಡ್ ನಿವಾಸಿಯಾದ ಯುವತಿಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬಂದ್ಯೋಡು ಅಡ್ಕದ ಫಕ್ರುದ್ದೀನ್ ಎಂಬವರ ಪತ್ನಿ ಆಯಿಶತ್ ಶಾಹಿದ (25) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಮುಗು ರೋಡ್‌ನಲ್ಲಿರುವ ಸ್ವಂತ ಮನೆಯಿಂದ ಆಯಿಶತ್ ಶಾಹಿದ ನಾಪತ್ತೆಯಾಗಿರುವುದಾಗಿ  ತಂದೆಯ ಸಹೋದರ ಅಬ್ದುಲ್ ರಹ್ಮಾನ್ ಎಂಬವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ರಾತ್ರಿ 8 ಗಂಟೆಗೆ ಮನೆಯಿಂದ ಹೊರಗೆ ಹೋದ ಈಕೆ ಮರಳಿ ಬಂದಿಲ್ಲವೆನ್ನಲಾಗಿದೆ.

ಕುಂಬಳೆ ಶಾಲೆ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ : ಹೊರಗಿನಿಂದ ಬಂದ ವ್ಯಕ್ತಿ ಹಲ್ಲೆಯಿಂದ ಇಬ್ಬರಿಗೆ ಗಾಯ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಹೊಡೆದಾಟ ನಡೆದಿದೆ. ಹೊಡೆದಾಟ ಮಧ್ಯೆ ಹೊರಗಿನಿಂದ ತಲುಪಿದ ಓರ್ವ ಇಬ್ಬರು ವಿದ್ಯಾರ್ಥಿಗಳಿಗೆ ಹಲ್ಲೆಗೈದು ಪರಾರಿಯಾಗಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ಮುಹಮ್ಮದ್ ಯಾಸಿಂ, ಶಮ್ಮಾಸ್ ಎಂಬಿವರನ್ನು ಕುಂಬಳೆ ಸರಕಾರಿ ಕಮ್ಯೂ ನಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ನಿನ್ನೆ ಸಂಜೆ ಶಾಲೆ ಬಿಟ್ಟು ಬಳಿಕ ಮನೆಗೆ ಹೊರಟ ಹತ್ತನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಶಾಲಾ ಕಂಪೌಂಡ್‌ನೊಳಗೆ ವಿದ್ಯಾರ್ಥಿಗಳ ಘರ್ಷಣೆ ನಡೆಯುತ್ತಿದ್ದಂತೆ ಹೊರಗಿನಿಂದ ಬಂದ ಓರ್ವ …

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನೇತಾರನ ಹೇಳಿಕೆ : ವಿಧಾನಸಭೆಯಲ್ಲಿ ವಿರೋಧಪಕ್ಷ ಸದ್ದುಗದ್ದಲ; ಅಧಿವೇಶನ ಮುಂದೂಡಿಕೆ

ತಿರುವನಂತಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಗುಂಡಿನ ದಾಳಿ ನಡೆಸಬೇಕೆಂದು ಟಿವಿ ವಾಹಿನಿ ಚರ್ಚೆ ವೇಳೆ ಕೇರಳದ ಬಿಜೆಪಿ ನಾಯಕ  ಪ್ರಿಂಟು ಮಹಾದೇವನ್ ಹೇಳಿಕೆ ನೀಡಿದ್ದರೆಂದೂ ಆದ್ದರಿಂದ  ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಮಾತ್ರವಲ್ಲ ಸದನದ ಇಂದಿನ ಕಲಾಪಗಳನ್ನೆಲ್ಲಾ ಬದಿಗಿರಿಸಿ ಆ ವಿಷಯದಲ್ಲಿ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ  ಕಾಂಗ್ರೆಸ್ ರಾಜ್ಯಾಧ್ಯಕ್ಷ ಸನ್ನಿ ಜೋಸೆಪ್ ಇಂದು ಬೆಳಿಗ್ಗೆ ಸದನದಲ್ಲ್ಲಿ ತುರ್ತು ಗೊತ್ತುವಳಿ ಮಂಡಿಸಿದರು ಆದರೆ ಇದು ಸುದ್ದಿ ವಾಹಿನಿಯಲ್ಲಿ ನೀಡಿದ ಹೇಳಿಕೆ ಯಾಗಿದೆ. ಆದ್ದರಿಂದ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಅಪಘಾತ: ಯುವಕನಿಗೆ ಗಂಭೀರ ಗಾಯ

ಕುಂಬಳೆ: ಬಂದ್ಯೋಡು ಬಳಿ ಕುಕ್ಕಾರು ರಾಷ್ಟ್ರೀಯ ಹೆದ್ದಾರಿ ಬದಿಯ ಗೋಡೆಗೆ ಬೈಕ್ ಢಿಕ್ಕಿ ಹೊಡೆದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಉಪ್ಪಳ ನಿವಾಸಿ ನೀರಜ್ (35) ಎಂಬವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ 6.30ರ ವೇಳೆ ಅಪಘಾತವುಂ ಟಾಗಿದೆ. ಅಪಘಾತ ಬಳಿಕ ಅರ್ಧ ಗಂಟೆ ಕಾಲ ರಸ್ತೆಯಲ್ಲೇ ಬಿದ್ದಿದ್ದ ಯುವಕನನ್ನು ಇತರ ವಾಹನ ಪ್ರಯಾಣಿಕರು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದ್ದರು. ಬಳಿಕ ಗಾಯ ಗಂಭೀರವಾಗಿರುವು ದರಿಂದ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.