ನ್ಯೂಮೋನಿಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತ್ಯು
ಉಪ್ಪಳ: ನ್ಯುಮೋನಿಯ ಬಾಧಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತಪಟ್ಟಳು. ಮಂಜೇಶ್ವರ ದೇರಂಗಡಿಪಳ್ಳದ ಲೋಕೇಶ್ ಎಂಬವರ ಪುತ್ರಿ ಎಂ. ವೀಕ್ಷಾ (5) ಮೃತಪಟ್ಟ ದುರ್ದೈವಿ. ಈಕೆ ಮಂಜೇಶ್ವರ ಎಸ್‌ಎಟಿ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಯಾಗಿದ್ದಳು. ತೀವ್ರ ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ವೀಕ್ಷಳನ್ನು ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ನ್ಯುಮೋನಿಯ ಬಾಧಿಸಿರುವುದಾಗಿ ತಿಳಿದುಬಂದಿತ್ತು. ಬಳಿಕ ತಜ್ಞ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದ ಮೂರು ವಾರಗಳಿಂದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಳು. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿದೆ. ಬಾಲಕಿಯನ್ನು ರಕ್ಷಿಸಲು …