ವ್ಯಾಪಾರಿ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ
ಮುಳ್ಳೇರಿಯ : ಪುಂಡೂರು ಬಳಿಯ ಮಾಳಂಗೈಯಲ್ಲಿ ಅಂಗಡಿ ನಡೆಸುತ್ತಿದ್ದ ಯುವಕ ನೇಣು ಬಿಗಿದು ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಮಾಳಂಗೈ ನಿವಾಸಿ ಮಣಿಕಂಠನ್ (46) ಆತ್ಮಹತ್ಯೆಗೈದ ಯುವಕ. ಅಂಗಡಿಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಇವರು ಈ ಹಿಂದೆ ಕಾರಡ್ಕದಲ್ಲಿ ಶೇಂದಿ ಅಂಗಡಿಯಲ್ಲಿ ಕಾರ್ಮಿಕರಾಗಿದ್ದರು. ದಿವಂಗತರಾದ ಎ.ಕೆ. ಗೋಪಾಲನ್- ಕಲ್ಯಾಣಿ ದಂಪತಿ ಪುತ್ರನಾದ ಮೃತರು ಪತ್ನಿ ಶೈಲಜಾ, ಮಕ್ಕಳಾದ ಕಾರ್ತಿಕ್, ಆದಿ, ಸಹೋದರರಾದ ಎ.ಕೆ. ಕುಮಾರನ್, ಎ.ಕೆ.ಶ್ರೀಧರನ್, ಎ.ಕೆ. ಉಪೇಂದ್ರನ್, ಎ.ಕೆ. ಶಶಿಧರನ್, …