ಪೆರ್ಮುದೆಯಲ್ಲಿ ಆಟೋ ರಿಕ್ಷಾ-ಕಾರು ಢಿಕ್ಕಿ: ಆಟೋ ಚಾಲಕ, ಮೂವರು ಪ್ರಯಾಣಿಕರಿಗೆ ಗಾಯ

ಕುಂಬಳೆ:  ಪೆರ್ಮುದೆಯಲ್ಲಿ ನಿನ್ನೆ ಸಂಜೆ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ  ಆಟೋ ಚಾಲಕ ಹಾಗೂ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಆಟೋ ಚಾಲಕ ಕಯ್ಯಾರು ದೊಡ್ಡಮೂಲೆಯ ಉದಯ ಕುಮಾರ್ (45), ಪ್ರಯಾಣಿಕರಾದ ಈಶ್ವರ, ಶೋಭಿಕ, ವಸಂತಿ ಎಂಬಿವರು ಗಾಯಗೊಂಡಿದ್ದಾರೆ. ಈ ಪೈಕಿ ಉದಯ ಕುಮಾರ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರರು ಚಿಕಿತ್ಸೆ ಪಡೆದು ಮುರಳಿದ್ದಾರೆ. ನಿನ್ನೆ ಸಂಜೆ ಕಯ್ಯಾರಿನಿಂದ ಪೆರ್ಮುದೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ ಪೆರ್ಮುದೆ ಪೇಟೆಗೆ ತಲುಪುತ್ತಿದ್ದಂತೆ ಕಾರು ಢಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ.

You cannot copy contents of this page