ಬಾಲಗೋಕುಲ 51ನೇ ರಾಜ್ಯ ಸಮ್ಮೇಳನ: ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ಜುಲೈ 10,11,12 ರಂದು ಕಾಸರಗೋಡಿನಲ್ಲಿ ನಡೆಯುವ ಬಾಲಗೋಕುಲ ರಾಜ್ಯ ವಾರ್ಷಿಕ ಸಮ್ಮೇಳನದ ಸ್ವಾಗತ ಸಂಘ ರೂಪೀಕರಣ ನಡೆಯಿತು. ಕಾಸರಗೋಡು ಅಮೃತಾನಂದಮಯಿ ಮಠ ಮಠಾಧಿಪತಿ ವೇದ ವೇದ್ಯಾಮೃತ ಚೈತನ್ಯ ಸ್ವಾಮೀಜಿ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ ಎಂ. ಸತ್ಯನ್ ಮಾಸ್ಟರ್ ಉಪಸ್ಥಿತರಿದ್ದರು. ಬಾಲಗೋಕುಲ ರಾಜ್ಯ ಉಪಾಧ್ಯಕ್ಷ ಎನ್.ವಿ ಪ್ರಜಿತ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ ಸದಾನಂದನ್, ಪ್ರಭಾಕರನ್ ಮಾಸ್ಟರ್, ಸಿ.ವಿ ಪೊದುವಾಳ್, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಮವ್ವಾರ್ ಮಾತನಾಡಿದರು. ಬಾಲಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಅಧ್ಯಕ್ಷ ದಿನೇಶ್ ಮಾಸ್ಟರ್ ವಂದಿಸಿದರು. ಕಾರ್ಯಕ್ರಮದ ಚೆಯರ್ಮೆನ್ ಆಗಿ ಸಿ.ವಿ ಪೊದುವಾಳ್ , ವರ್ಕಿಂಗ್ ಚೆಯರ್ಮೆನ್ ಆಗಿ ಹರಿಶ್ಚಂದ್ರ ನಾಯಕ್, ಜನರಲ್ ಕನ್ವೀನರ್ ಆಗಿ ರಾಜೇಂದ್ರ ಮವ್ವಾರ್ ಮತ್ತು ಖಜಾಂಚಿಯಾಗಿ ರಾಧಾಕೃಷ್ಣನ್, 501 ಸದಸ್ಯರ ಸ್ವಾಗತ ಸಂಘ ರೂಪೀಕರಣ ಮಾಡಲಾಯಿತು.

RELATED NEWS

You cannot copy contents of this page