ಬಿಎಂಎಸ್ ಮೀಂಜ ಪಂಚಾಯತ್ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಭಾರತೀಯ ಮಜ್ಡೂರ್ ಸಂಘ ಮಿಂಜ ಪಂಚಾಯತ್ ಸಮ್ಮೇಳನ ಮೊರತ್ತಣೆ ಬಿ ಆರ್ ಕಾಂಪ್ಲೆಕ್‌ನ ಅನುಗ್ರಹ ಸಭಾಂಗಣದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ರವಿಚಂದ್ರ ಶೆಟ್ಟಿ ಪದೆಂಜಿಬೈಲ್ ಅಧ್ಯಕ್ಷತೆ ವಹಿಸಿದÀÄ್ದ, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಮುಖ್ಯ ಭಾಷಣ ಮಾಡಿದರು. ನೂತನ ಪದಾಧಿಕಾರಿಗಳನ್ನು ವಲಯ ಅಧ್ಯಕ್ಷ ರವಿ ಎಂ.ಕೆ. ಕೋಳ್ಯೂರು ಆಯ್ಕೆ ಮಾಡಿದರು. ಪಂಚಾಯತ್ ಸದಸ್ಯೆ ಶಾಂತ ಕೋಳ್ಯೂರು, ಗೋಪಿನಾಥ್ ಮೊರತ್ತಣೆ ಭಾಗವಹಿಸಿದರು. ಸತೀಶ್ ಬಟ್ಟಿಪದವ್ ವರದಿ ಮಂಡಿಸಿದರು.
ನೂತನ ಅಧ್ಯಕ್ಷರಾಗಿ ಪ್ರಪುಲ್ಲ ಉಜಿರೆ. ಉಪಾಧ್ಯಕ್ಷರಾಗಿ ರವಿಚಂದ್ರ ಶೆಟ್ಟಿ ಪದೆಂಜಿ ಬೈಲ್. ರಾಮಚಂದ್ರ ಬಟ್ಟಿಪದವ್, ಜಯಲಕ್ಸ್ಮಿ ಚಿಗುರುಪಾದೆ.
ಕಾರ್ಯದರ್ಶಿಯಾಗಿ ಮನೋಜ್ ಬಟ್ಟಿಪದವ್, ಜೊತೆ ಕಾರ್ಯದರ್ಶಿ ಗಳಾಗಿ ರಾಮಚಂದ್ರ ಕೌಡೂರ್, ರೋಹಿತ್ ಬೆಜ್ಜ, ಅರುಣ ಉಜಿರೆ, ಕೋಶಾಧಿಕಾರಿಯಾಗಿ ಬಾಲಕÊಷ್ಣ ಉಜಿರೆ ಹಾಗೂ ಸದಸ್ಯರಾಗಿ ಮಿಥುನ್ ಕೋಳ್ಯೂರು, ಮಿಥುನ್ ಕಳಿಯೂರು, ಸವಿತ ಕೋಳ್ಯೂರು, ಪ್ರತಾಪ್ ಮೊರತ್ತಣೆ, ಸಂದೀಪ್ ಕಡಂ ಬಾರು, ದಾಮೋದರ ಉಜಿರೆ. ಶಿವ ಕುಮಾರ್ ಬಟ್ಟಿಪದವ್. ಜಯೇಶ್ ಬೆಜ್ಜರನ್ನು ಆರಿಸಲಾಯಿತು. ರಾಮಚಂದ್ರ ಬಟ್ಟಿಪದವ್ ಸ್ವಾಗತಿಸಿ, ಮನೋಜ್ ಬಟ್ಟಿಪದವ್ ವಂದಿಸಿದರು.

You cannot copy contents of this page