ಬಜೆಟ್‌ನಲ್ಲಿ ಖಾಸಗಿ ಬಸ್ ಉದ್ಯಮಕ್ಕೆ ನಿರಾಶೆ ಮಾತ್ರ- ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ರಾಜ್ಯದ ಐಕ್ಯರಂಗ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಬಸ್ ಮಾಲಕರಿಗೆ ಯಾವುದೇ ಪ್ರಯೋಜನ ವಿಲ್ಲವೆಂದು  ಕಾಸರಗೋಡು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ದೂರಿದೆ. ಜನಮುನ್ನಡೆ ಯಾತ್ರೆಯಲ್ಲಿ ಖಾಸಗಿ ಬಸ್‌ಗಳಿಗೆ ಸಹಾಯಕವಾದ ರೀತಿಯಲ್ಲಿ ಯೋಜನೆ ಹಾಕಲಾಗುವುದೆಂದು ಹಣಕಾಸು ಸಚಿವರಾಗಿರುವ ವಿ.ಡಿ. ಸತೀಶನ್ ಹೇಳಿಕೆ ನೀಡಿದ್ದರು. ಆದರೆ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್‌ಟಿಸಿ ಸಂಚರಿಸದ ಒಳಪ್ರದೇಶಗಳ ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಹೆದ್ದಾರಿವರೆಗೆ ತಲುಪಿ ಅಲ್ಲಿಂದ ಕೆಎಸ್‌ಆರ್‌ಟಿಸಿಯಲ್ಲಿ ಸಂಚರಿಸಲು ಆರಂಭಿಸಿದ್ದಾರೆ. ಇದರಿಂದ ಗ್ರಾಮ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಸಂಚಾರ ನಡೆ ಸುವ ಖಾಸಗಿ ಬಸ್‌ಗಳ ಆದಾಯ ಕುಸಿದಿದೆ. ಕೇರಳದ ನೂರೂವರೆ ಕೋಟಿ ಜನರಲ್ಲಿ ೭೫ ಶೇಕಡಕ್ಕೂ ಹೆಚ್ಚು ಮಂದಿ ಪ್ರಯಾಣಕ್ಕೆ ಉಪಯೋಗಿಸುತ್ತಿದ್ದುದು ಖಾಸಗಿ ಬಸ್‌ಗಳನ್ನಾಗಿತ್ತು. ಪ್ರಸ್ತುತ ೧೧,೦೦೦ ರೂ. ಸಂಗ್ರಹವಾಗುವ ಬಸ್‌ವೊಂದಕ್ಕೆ ಒಟ್ಟು ಇಎಂಐ ಸಹಿತದ ಚಟುವಟಿಕಾ ವೆಚ್ಚ ೧೩೦೦೦ದಷ್ಟು ಆಗುತ್ತಿದ್ದು ಕನಿಷ್ಠ ದಿನಂಪ್ರತಿ ೨೦೦೦ದಿಂದ ೩೦೦೦ ರೂ.ವರೆಗೆ ನಷ್ಟ ಉಂಟಾಗುತ್ತಿದೆ. ಈ ರೀತಿ ನಷ್ಟದಲ್ಲಿ ಬಸ್ ಉದ್ಯಮವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ ವಾಗದ ಸಂದರ್ಭದಲ್ಲಿ ಕೇವಲ ೫೦ ಶೇಕಡಾ ತೆರಿಗೆ ಕಡಿತದಿಂದ ಯಾವುದೇ ಪ್ರಯೋಜನವಿಲ್ಲವೆಂದು ಫೆಡರೇಶನ್ ದೂರಿದೆ. ಈ ಹಿನ್ನೆಲೆ ಯಲ್ಲಿ ೪೫೨ ರೂ. ಆರ್‌ಟಿ ಕಚೇರಿ ಯಲ್ಲಿ ಪಾವತಿಸಿ ಸ್ಟೋಪೇಜ್ ಅರ್ಜಿ ಸಲ್ಲಿಸುವ ಬಗ್ಗೆಯೂ ಫೆಡರೇಶನ್ ಪರಿಶೀಲಿಸುತ್ತಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page