ಬದಿಯಡ್ಕ: ಶತಮಾನೋತ್ಸವದ ಸಂಭ್ರಮದಲ್ಲಿರುವ ಪೆರಡಾಲ ಸರಕಾರಿ ಹೈಸ್ಕೂಲ್‌ಗೆ ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಭೇಟಿ ನೀಡಿದರು. ಶಾಲೆಯ ಶತಮಾನೋತ್ಸ ಕೇವಲ ಒಂದು ಸಂಸ್ಥೆಯ ವಾರ್ಷಿಕೋತ್ಸವಲ್ಲ. ಅದು ನೂರು ವರ್ಷಗಳ ಶೈಕ್ಷಣಿಕ ಪರಂಪರೆ, ಸಾಮಾಜಿಕ ಬದ್ಧತೆ, ತಲೆಮಾರುಗಳ ಸಾಧನೆಯನ್ನು ಸ್ಮರಿಸುವ ಸಂದರ್ಭವಾಗಿದೆ.
ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣದ ಬೆಳವಣಿಗೆಗೆ ಇಂತಹ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾದುದು ಎಂದು ಅವರು ನುಡಿದರು. ಶಾಲೆಯ ಅಭಿವೃದ್ಧಿ, ಕನ್ನಡ ಭಾಷೆಯ ಪ್ರೋತ್ಸಾಹ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ನುಡಿದರು. ಮುಖ್ಯೋಪಾಧ್ಯಾಯಿನಿ ಸೌರಭ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸಾಮಾಜಿಕ ಮುಖಂಡ ತೆಕ್ಕೇಕರೆ ಶಂಕರನಾರಾಯಣ ಭಟ್, ಪಂ. ಸದಸ್ಯ ಶ್ಯಾಂಪ್ರಸಾದ್ ಮಾನ್ಯ, ಬಾಲಕೃಷ್ಣ ಶೆಟ್ಟಿ, ರವಿ ನಾಯ್ಕಾಪು, ಅಖಿಲೇಶ್ ನಗುಮುಗಂ, ಪ್ರೋ. ಶ್ರೀನಾಥ್, ಥೋಮಸ್ ಡಿ’ಸೋಜ, ಹರೀಶ್ ಗೋಸಾಡ, ಖಾಲಿದ್, ಇಬ್ರಾಹಿಂ, ಮನೋಜ್, ರಂಜಿತ್, ಮಾಧವ, ಶಾಹೀದ್ ಉಪಸ್ಥಿತರಿದ್ದರು.




