ಅಡೂರಿನಲ್ಲಿ ಸುಬೇದಾರ್ ಸಂಪತ್‌ಕುಮಾರ್‌ರಿಗೆ ಅಭಿನಂದನೆ

ಮುಳ್ಳೇರಿಯ: ಭಾರತೀಯ ಭೂಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ಸಂಪತ್ ಕುಮಾರ್ ಕೆ. ಅವರನ್ನು ಅಡೂರಿನ ವಿದ್ಯಾಭಾರತಿ ವಿದ್ಯಾಲಯ ಹಾಗೂ ಶ್ರೀರಾಮೋ ತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಅಭಿನಂದಿಸಲಾಯಿತು. ವಿದ್ಯಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ಯಪ್ರೇಮ ಬಾರಿತ್ತಾಯ ಅಧ್ಯಕ್ಷತೆ ವಹಿಸಿದರು. ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಅಭಿನಂದನಾ ಭಾಷಣ ಮಾಡಿದರು. ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಸಾರ್ಜೆಂಟ್ ಬಾಲಚಂದ್ರ ಕೇಕುಣ್ಣಾಯ ಉದ್ಘಾಟಿಸಿದರು. ಅಪ್ಪಕುಂಞಿ ಮಾಸ್ತರ್, ರಾಜರಾಮ ಸರಳಾಯ, ರಾಧಾಕೃಷ್ಣ, ಲಕ್ಷ್ಮಣ ಉಪಸ್ಥಿತರಿದ್ದರು. ಈ ವೇಳೆ ೨೪ ಗಂಟೆಗಳ ಕೂಚುಪುಡಿ ನೃತ್ಯ ಪ್ರದರ್ಶನ ನಡೆಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ ಅಭಿಷೇಕ್ ಕಣೆ ಮಾರಡ್ಕ ರನ್ನು ಅಭಿನಂದಿಸಲಾಯಿತು. ಶಾರದಾದೇವಿ ಅಭಿನಂದನಾ ಭಾಷಣ ಮಾಡಿದರು. ವೆಂಕಟ್ರಾಜ್ ಸ್ವಾಗತಿಸಿ, ಗಣೇಶ್ ಒ. ವಂದಿಸಿದರು. ಬಾಲಸುಬ್ರಹ್ಮಣ್ಯ ಭಟ್ ಬೈತ್ತನಡ್ಕ ನಿರೂಪಿಸಿದರು.

RELATED NEWS

You cannot copy contents of this page