ತಿರುವನಂತಪುರ: ಮುಖ್ಯಮಂತ್ರಿ ವಿ.ಡಿ. ಸತೀಶನ್ರ ಕಾರನ್ನು ತಡೆದು ನಿಲ್ಲಿಸಿ ಅವರೊಂದಿಗೆ ಅನುಚಿತ ರೀತಿ ಯಲ್ಲಿ ವರ್ತಿಸಿದ ಕಾಂಗ್ರೆಸ್ ನೇತಾರ ನನ್ನು ತಿರುವನಂತಪುರ ಶ್ರೀಕಾರ್ಯಂ ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ನ ತಿರುವನಂತಪುರ ಜಿಲ್ಲಾ ಸಮಿತಿ ಸದಸ್ಯ ಚೆಂದಿ ಅನಿಲ್ ಬಂಧಿತ ವ್ಯಕ್ತಿ. ಮುಖ್ಯಮಂತ್ರಿಯ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸುವಿಕೆ, ಅವರ ವಾಹನ ತಡೆದು ನಿಲ್ಲಿಸುವಿಕೆ, ಅವರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸುವಿಕೆ ಮತ್ತು ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸುವಿಕೆ ಎಂಬೀ ಸೆಕ್ಷನ್ಗಳ ಪ್ರಕಾರ ಚೆಂದಿ ಅನಿಲ್ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ತಿರುವನಂತಪುರ ಕಳಕ್ಕೂಟಂ ಅಸಿಸ್ಟೆಂಟ್ ಪೊಲೀಸ್ ಕಮಿಶನರ್ ಈ ಬಗ್ಗೆ ಮುಂದಿನ ತನಿಖೆ ಆರಂಭಿಸಿದ್ದಾರೆ. ಬಂಧಿತನನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿ ಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರ ಚೆಂದಾಳಂತಿ ಶ್ರೀ ನಾರಾಯಣಗುರುಕುಲದಲ್ಲಿ ನಿನ್ನೆ ನಡೆದ ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಹೋಗುತ್ತಿದ್ದ ದಾರಿ ಮಧ್ಯೆ ಅವರು ಸಂಚರಿಸುತ್ತಿದ್ದ ಕಾರನ್ನು ಅನಿಲ್ ತಡೆದು ನಿಲ್ಲಿಸಿದ್ದನ. ಆ ವೇಳೆ ಕಾರಿನಿಂದ ಹೊರಗಿಳಿದ ಮುಖ್ಯಮಂತ್ರಿ ನಿನ್ನ ಸಮಸ್ಯೆ ಏನು ಎಂದು ಪ್ರಶ್ನಿಸಿದ್ದರಲ್ಲದೆ ಸ್ವಲ್ಪ ಮರ್ಯಾದೆಯಿಂದ ಮಾತನಾಡು ಎಂದು ಆತನಲ್ಲಿ ತಿಳಿಸಿದ್ದರು. ಆ ಕುಪಿತಗೊಂಡ ಅನಿಲ್ ಮರ್ಯಾದೆ ಯಿಂದ ಮಾತನಾಡದಿದ್ದಲ್ಲಿ ನೀವು ಏನು ಮಾಡುವಿರಿ ಎಂದು ಮುಖ್ಯಮಂತ್ರಿಗೆ ಹೌಹಾರಿದ್ದಾನೆ. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ತೆಗೆದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ನಾನು ತಪ್ಪೇನು ಮಾಡಿಲ್ಲ. ಪಕ್ಷದೊಳಗಿನ ಅಂತಃಕಲ ಹದಿಂದ ನನ್ನನ್ನು ಬಂಧಿಸಲಾಗಿದೆ ಯೆಂದು ಇದೇ ಸಂದರ್ಭದಲ್ಲಿ ಚೆಂದಿ ಅನಿಲ್ ಹೇಳಿಕೆ ನೀಡಿದ್ದಾನೆ.







