ಕ್ರೇನ್ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ: ತಪ್ಪಿದ ಭಾರೀ ದುರಂತ

ಕಾಸರಗೋಡು: ಕ್ರೇನ್ ಹೇರಿ ಸಂಚರಿಸುತ್ತಿದ್ದ ಟ್ರಕ್‌ಗೆ  ಬೆಂಕಿ ಹತ್ತಿಕೊಂಡ ಘಟನೆ ಇಂದು ಮುಂಜಾನೆ 3 ಗಂಟೆಗೆ ಮೇಲ್ಪರಂ ಬದಲ್ಲಿ ಸಂಭವಿಸಿದೆ. ಆಂಧ್ರಪ್ರದೇಶ ನಿವಾಸಿಯಾದ ನಾರಾಯಣ ರೆಡ್ಡಿ ಎಂಬವರ ಮಾಲಕತ್ವದಲ್ಲಿರುವ 500 ಟನ್ ಭಾರ ಎತ್ತುವ ಸಾಮರ್ಥ್ಯವುಳ್ಳ ಕ್ರೇನ್  ಹಾಗೂ  ಟ್ರಕ್‌ಗೆ ಬೆಂಕಿ ತಗಲಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಪಡನ್ನಕ್ಕಾಡ್ ರೈಲ್ವೇ ಮೇಲ್ಸೇತುವೆಯ ಗಾರ್ಡರ್ ಗಳನ್ನು ಎತ್ತುವ ಕೆಲಸ ಮುಗಿಸಿ ಟ್ರಕ್ ಕ್ರೇನ್‌ನೊಂದಿಗೆ ಮರಳುತ್ತಿತ್ತು. ಮೇಲ್ಪರಂಬಕ್ಕೆ ತಲುಪಿದಾಗ ಟ್ರಕ್‌ನ ಹಿಂಬದಿಯಲ್ಲಿ  ಬೆಂಕಿ ಕಾಣಿಸಿಕೊಂ ಡಿದೆ. ಕೂಡಲೇ ಚಾಲಕ ಲಾರಿಯನ್ನು ನಿಲ್ಲಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದನು.  ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್, ಉಮೇಶನ್, ಎಂ.ಎ ವೈಶಾಖ್, ಪಿ.ಎಸ್. ಮುಹಮ್ಮದ್ ಸಿರಾಜ್, ಟಿ.ಎಸ್. ಜುಬಿನ್, ವಿ.ಕೆ. ಶೈಜು, ಎ. ರಾಜೇಂದ್ರನ್, ಹೋಂ ಗಾರ್ಡ್ ರಾಜೇಂದ್ರನ್ ಎಂಬಿವರು ತಕ್ಷಣ ತಲುಪಿ ಬೆಂಕಿ ನಂದಿಸಿದ್ದಾರೆ. ಇದರಿಂದ ಭಾರೀ ದೊಡ್ಡ ದುರಂತ ತಪ್ಪಿಹೋಗಿದೆ.

You cannot copy contents of this page