ಅಸಿಸ್ಟೆಂಟ್ ಮೆನೇಜರ್ ಹುದ್ದೆ ಕೊಡಿಸುವುದಾಗಿ ನಂಬಿಸಿ 13 ಲಕ್ಷ ಪಡೆದು ವಂಚನೆ: ಕೇಸು

ಬದಿಯಡ್ಕ: ಕೇರಳ ಪ್ರವಾಸೋದ್ಯಮ ಇಲಾಖೆಯಲ್ಲಿ  ಅಸಿಸ್ಟೆಂಟ್ ಮೆನೇಜರ್ ಹುದ್ದೆ ನೇಮಕಾತಿಗೊಳಿಸುವುದಾಗಿ ನಂಬಿಸಿ 13 ಲಕ್ಷ ರೂ. ಪಡೆದು ನಂತರ ಉದ್ಯೋಗ ಕೊಡಿಸದೆ  ಹಾಗೂ ನೀಡಿದ ಹಣವನ್ನು ಹಿಂತಿರುಗಿಸದ ಬಗ್ಗೆ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಬೇಳ ಬಿರ್ಮಿನಡ್ಕ ಜಬಾಲ್ ನೂರ್ ಮಂಜಿಲ್‌ನ ಅಲಿ ಬಿ.ಕೆ (25) ಎಂಬವರು ಈ ಬಗ್ಗೆ ದೂರು ನೀಡಿದ್ದು ಅದರಂತೆ ತಿರುವನಂತಪುರ ವಟ್ಟಪ್ಪಾರ ಅಂದಿಯೂರುಕೊನ್ನಂ ಮೋಹನಪುರಂ ನಿವಾಸಿ ಮೊಹಮ್ಮದ್ ಹುಸೈನ್ ಎಂ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.

ನಾನು ಎಸ್‌ಎಚ್‌ಆರ್ ಹ್ಯೂಮನ್ ರೈಟ್ಸ್ ಫೌಂಡೇಶನ್‌ನ ನಿರ್ದೇಶಕನೆಂದೂ ಕೇರಳ ಪ್ರವಾಸೋ ದ್ಯಮ ಇಲಾಖೆಯಲ್ಲಿ ಅಸಿಸ್ಟೆಂಟ್ ಮೆನೇಜರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಆರೋಪಿ 2024 ಜೂನ್ 21-2024 ಅಗೋಸ್ತ್ 27ರ ಮಧ್ಯೆಗಿನ ಅವಧಿಯಲ್ಲಿ ಆತ ತನ್ನಿಂದ 13 ಲಕ್ಷ  ರೂ. ಪಡೆದು ಬಳಿಕ ಉದ್ಯೋಗವನ್ನಾಗಲೀ, ನೀಡಿದ ಹಣವನ್ನಾಗಲೀ ನೀಡದೆ ವಂಚಿಸಿರುವುದಾಗಿ  ಪೊಲೀಸರಿಗೆ ನೀಡಿದ ದೂರಿನಲ್ಲಿ ಅಲಿ ಬಿ.ಕೆ. ಆರೋಪಿಸಿದ್ದಾರೆ.

You cannot copy contents of this page