ಬಾಲಕಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: 16ರ ಹರೆಯದ ಬಾಲಕಿ ಬೆಡ್‌ರೂಂನ ಕಿಟಿಕಿ ಸರಳಿಗೆ ನೇಣುಬಿಗಿದು ಸಾವಿಗೀಡಾದ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.   ಬೇಕಲ  ಪೊಲೀಸ್ ಠಾಣೆ ವ್ಯಾಪ್ತಿಯ ತಾಯೆ ಮವ್ವಲ್ ಎಂಬಲ್ಲಿ ಘಟನೆ ನಡೆದಿದೆ.ಇಲ್ಲಿನ ಇಸ್ಮಾಯಿಲ್ ಎಂಬವರ ಪುತ್ರಿ ರಿನ್‌ಶ (16) ಸಾವಿಗೀಡಾದ ಬಾಲಕಿ. ವಿಷಯ ತಿಳಿದು ಬೇಕಲ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಬಾಲಕಿ ತಚ್ಚಂಗಾಡ್ ಸರಕಾರಿ ಹೈಸ್ಕೂಲ್‌ನಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉನ್ನತ ಶಿಕ್ಷಣಕ್ಕೆ  ಅರ್ಹತೆ ಪಡೆದಿದ್ದಳು. ಆದರೆ ಮೊದಲ ಎರಡು ಅಲಾಟ್ ಮೆಂಟ್‌ನಲ್ಲಿ ಈಕೆಗೆ ಸೀಟು ಲಭಿಸಿರಲಿಲ್ಲ. ಇದರಿಂದ ಮನ ನೊಂದು ಸಾವಿಗೆ ಶರಣಾಗಿರಬ ಹುದೆಂದು ಸಂಶಯಿಸಲಾಗಿದೆ.

RELATED NEWS

You cannot copy contents of this page