ಜಲಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿನಿಯರಿಗೆ ಕಿರುಕುಳ: ಮಂಜೇಶ್ವರದ ಮೂವರು ಯುವಕರು ಬೆಳ್ತಂಗಡಿಯಲ್ಲಿ ಸೆರೆ

ಕಾಸರಗೋಡು: ಕರ್ನಾಟಕದ ಬೆಳ್ತಂಗಡಿ ಸಮೀಪ ದಿಡುಪೆಯಲ್ಲಿ ಜಲ ಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿ ನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಅವರಿಗೆ ಕಿರುಕುಳ ನೀಡಿದ ಮೂವರು ಯುವಕರನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

 ಮಂಜೇಶ್ವರ ನಿವಾಸಿಗಳೆಂದು ಹೇಳಲಾದ ಅಬ್ದುಲ್ ಖಾದರ್ ಅಲ್ತಾಫ್ (36), ಫೈಸಲ್‌ಆದಿಲ್ (27), ಉಸ್ಮಾನ್ ಸಲೀಂ (18) ಎಂಬಿವರು ಬಂಧಿತ ಆರೋಪಿಗಳಾಗಿದಾರೆಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ. 

ಮಂಗಳೂರಿನ ಕಾಲೇಜು ವಿದ್ಯಾರ್ಥಿ ನಿಯರಾದ ಮೂವರು ಯುವತಿಯರು ಮೂವರು ಯುವಕರೊಂದಿಗೆ ಜಲಪಾತ ವೀಕ್ಷಿಸಲು ತೆರಳಿದ್ದರು.  ಈ ಮಧ್ಯೆ ಅಲ್ಲಿಗೆ ತಲುಪಿದ ಆರೋಪಿಗಳು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆಂದು ಹೇಳಲಾಗುತ್ತಿದೆ. ಈ ವೇಳೆ ವಿದ್ಯಾರ್ಥಿನಿಯರು ವಿರೋಧಿಸಿ ಬೊಬ್ಬೆ ಹಾಕಿದ್ದು, ಬೊಬ್ಬೆ ಕೇಳಿ ಸ್ಥಳೀಯರು ಅಲ್ಲಿಗೆ ತಲುಪಿ  ಯುವಕರನ್ನು ಕೈಯ್ಯಾರೆ ಸೆರೆಹಿಡಿದಿದ್ದಾರೆ. ಈ ವಿಷಯ ಲಭಿಸಿದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಗಳನ್ನು ಬಂಧಿಸಿ ದ್ದಾರೆ. ಆರೋಪಿಗಳು ತಲುಪಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವು ದಾಗಿಯೂ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page