ಉಪ್ಪಳ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಉಪ್ಪಳ ಸಹಿತ ವಿವಿಧ ಹೊಳೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಉಪ್ಪಳ, ಶಿರಿಯ, ಕುಬಣೂರು, ಸುವರ್ಣಗಿರಿ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸಮೀಪದ ತೋಟಗಳಿಗೆ ನುಗ್ಗಿದೆ. ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದ ಒಳಗಡೆ ನೀರು ತುಂಬಿ ಜಲಾವೃತಗೊಂಡಿದೆ. ಶಾಂತಿಗುರಿ- ಕುಬಣೂರು ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರ ಮೊಟಕಾಗುವ ಭೀತಿ ಕಂಡು ಬಂದಿದೆ. ಕುಬಣೂರು ಹೊಳೆಯ ದೇರ್ಜಾಲ್ ಸೇತುವೆ ಬಳಿ ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳು, ತ್ಯಾಜ್ಯಗಳು ಸಂಗ್ರಹಗೊಂಡು ನೀರು ರಸ್ತೆಯಲ್ಲೇ ಹರಿಯುವ ಸ್ಥಿತಿ ಉಂಟಾಗಿದೆ.






