ಅಕ್ರಮ ಅವಯವ ವ್ಯವಹಾರ: ಇ.ಡಿಗೆ ನಿರ್ಣಾಯಕ ದಾಖಲುಪತ್ರ ಲಭ್ಯ; ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ

ಕಾಸರಗೋಡು: ಎರ್ನಾಕುಳಂ ಮತ್ತು ಕೊಲ್ಲಂನ ಕೆಲವು ಆಸ್ಪತ್ರೆಗಳನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಅಕ್ರಮ ಅವಯವ ವ್ಯವಹಾರಕ್ಕೆ ಸಂಬಂಧಿಸಿ ನಡೆಸಲಾದ ತನಿಖೆಯಲ್ಲಿ ಡೈರೆಕ್ಟರೇಟ್ ಆಫ್ ಎನ್‌ಫೋರ್ಸ್‌ಮೆಂಟ್ (ಇ.ಡಿ)ಗೆ ಹಲವು ನಿರ್ಣಾಯಕ ದಾಖಲು ಪತ್ರಗಳು ಲಭಿಸಿದ್ದು ಅದರ ಆಧಾರದಲ್ಲಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.

ಇದು ಮಾತ್ರವಲ್ಲದೆ, ಈ ಪ್ರಕರಣದ ಆರೋಪಿಗಳ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಇ ಡಿ ಮುಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜೂನ್ 18ರಂದು ಪ್ರಕರಣದ ಪ್ರಧಾನ ಸೂತ್ರಧಾರ ಎನ್ನಲಾಗಿರುವ ಮೊಹಮ್ಮದ್ ನಜೀಬ್ ಕಲ್ಲಟ್ರ ಕಳನಾಡು ಕಲ್ಲಟ್ರದಲ್ಲಿರುವ ಮನೆ, ಮೇಲ್ಪರಂಬದಲ್ಲಿರುವ  ಆತನ ಇನ್ನೊಂ ದು ಕೇಂದ್ರ ಮತ್ತು ಎರ್ನಾಕುಳಂ, ಕೊಲ್ಲಂನ ಕೆಲವು ಆಸ್ಪತ್ರೆಗಳಿಗೂ ಇ ಡಿ  ಏಕಕಾಲದಲ್ಲಿ ದಾಳಿ ನಡೆಸಿ ಸಮಗ್ರ ಪರಿಶೀಲನೆ ನಡೆಸಿತ್ತು. ಮಾತ್ರವಲ್ಲ ಹಣಕ್ಕಾಗಿ ಅವಯವ ದಾನಗೈದವರು, ಅವಯವಗಳನ್ನು ಸ್ವೀಕರಿಸಿದವರ ಕುರಿತು ಸಮಗ್ರ ಮಾಹಿತಿಗಳನ್ನೊಳಗೊಂಡ ಹಲವು ನಿರ್ಣಾಯಕ ದಾಖಲು ಪತ್ರಗಳು, ನಕಲಿ ದಾಖಲು ಪತ್ರಗಳನ್ನು ಆಸ್ಪತ್ರೆಗಳಿಂದ ಇ.ಡಿಗೆ ಲಭಿಸಿದೆ. ತನಿಖೆಯ ಅಂಗವಾಗಿ ಈ ಪ್ರಕರಣದ ಎಲ್ಲಾ ಆರೋಪಿಗಳು ಹಾಗೂ ಈ ವ್ಯವಹಾರದೊಂದಿಗೆ ನಂಟು ಹೊಂದಿದವರ ವ್ಯಕ್ತಿಗಳ ಕುರಿತಾದ ಎಲ್ಲಾ ಮಾಹಿತಿಗಳನ್ನೂ ಇ.ಡಿ ಈಗಾಗಲೇ ಸಂಗ್ರಹಿಸಿದೆ. ಮಾತ್ರವಲ್ಲ ಇಂತಹ ಅಪರಾಧ ಕೃತ್ಯಗಳಿಂದ ಆರೋಪಿಗಳಿಗೆ  ಲಭಿಸಿದ ಆದಾಯ, ಅದನ್ನು ಉಪಯೋಗಿಸಿ ಅವರು ಖರೀದಿಸಿದ ಆಸ್ತಿಗಳ ಕುರಿತಾದ  ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದೆ. ಅದೇ ರೀತಿ ಅನಧಿಕೃತವಾಗಿ ಅವಯವ ಸಾಗಾಟ ದಂಧೆಗೆ ಸಹಾಯ ಒದಗಿಸಿದ ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳ ಎಲ್ಲಾ ಬ್ಯಾಂಕ್ ವ್ಯವಹಾರಗಳನ್ನು ಸ್ಥಗಿತಗೊಳಿಸುವ ಆದೇಶವನ್ನೂ ಇ.ಡಿ ಜ್ಯಾರಿಗೊಳಿಸಿದೆ. ಇದರ ಜತೆಗೆ ಈ ಪ್ರಕರಣದ ಆರೋಪಿಗಳ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕುವ ಅಗತ್ಯದ ಕ್ರಮಗಳನ್ನೂ ಇ.ಡಿ ಆರಂಭಿಸಿದೆ.

ಕೋವಿಡ್ ಮಹಾಮಾರಿ ಹರಡತೊಡಗಿದ ಬಳಿಕ ೨೦೨೧ರಿಂದ ಈ ಅಕ್ರಮ ಅವಯವ ವ್ಯವಹಾರ ಆರಂಭಗೊಂಡಿತ್ತೆಂದೂ, ನಕಲಿ ದಾಖಲು ಪತ್ರಗಳನ್ನು ತಯಾರಿಸಿ ಇಂತಹ ವ್ಯವಹಾರ ನಡೆಸಲಾಗುತ್ತಿತ್ತೆಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಇ,ಡಿ ಹೇಳಿದೆ. ಅವಯವ ದಾನಿಗಳಿಗೆ 5ರಿಂದ 15 ಲಕ್ಷ ರೂ ತನಕ ಹಣ ನೀಡಿದ ಬಳಿಕ, ಅವಯವಗಳನ್ನು 20ರಿಂದ 50 ಲಕ್ಷ ರೂ. ತನಕ ಮಾರಾಟ ಮಾಡುವುದು ಈ ದಂಧೆಯ ಪ್ರಧಾನ ಕಸುಬು ಆಗಿದೆ ಎಂದು ಇ.ಡಿ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.

You cannot copy contents of this page