ಜಲಜೀವನ್ ಮಿಷನ್: ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕೆಡಬ್ಲ್ಯುಎ ಎಂಪ್ಲೋಯೀಸ್ ಸಂಘ್ ಆಗ್ರಹ

ಕಾಸರಗೋಡು: ಕೋಟ್ಯಂತರ ರೂ. ವೆಚ್ಚ ಮಾಡಿಯೂ ಜಲಜೀವನ್ ಮಿಷನ್ ಯೋಜನೆಯಲ್ಲಿ ಲೋಪ ಸಂಭವಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೆಡಬ್ಲ್ಯುಎ ಎಂಪ್ಲೋ ಯೀಸ್ ಸಂಘ್ ಕಾಸರಗೋಡು ಜಿಲ್ಲಾ ಸಮಿತಿ ಆಗ್ರಹಿಸಿದೆ. ಉಚಿತ ಸಂಪರ್ಕವೆಂದು ತಿಳಿಸಿ ಅಗತ್ಯವಿಲ ದವರಿಗೆ ಕೂಡಾ ಒತ್ತಾಯಪೂರ್ವಕ ಸಂಪರ್ಕ ನೀಡಿದ ಹಿನ್ನೆಲೆಯಲ್ಲಿ ಸಂಪರ್ಕಗಳ ಸಂಖ್ಯೆ ಹೆಚ್ಚಾಯಿದಾದರೂ ನೀರು ಲಭ್ಯವಾಗುವ ಟ್ಯಾಪ್‌ಗಳ ಸಂಖ್ಯೆ ಸಾಮಾನ್ಯ ಕಡಿಮೆ ಇದೆ. ನೀರು ಲಭಿಸದೆ ಬಿಲ್ಲು ಪಾವತಿಸಬೇಕಾಗಿ ಬಂದಿರುವುದ ರಿಂದ ಫಲಾನುಭವಿಗಳು ಸಂಪರ್ಕ ವಿಚ್ಛೇಧಿಸಲು ಮುಂದಾಗುತ್ತಿದ್ದಾರೆ. ಕಾರಡ್ಕ, ದೇಲಂಪಾಡಿ, ಕುಂಬ್ಡಾಜೆ, ಚೆಮ್ನಾಡ್ ಮೊದಲಾದ ಪಂಚಾಯತ್ ಗಳಲ್ಲಿ  ಪೈಪ್ ಸ್ಥಾಪಿಸಲಾಯಿತಾದರೂ ಟ್ಯಾಂಕ್‌ಗಳನ್ನು ಸ್ಥಾಪಿಸಲಾಗಿಲ್ಲ. ಯೋಜನೆ ನಿರ್ವಹಣೆಯ ಲೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಭೆ ಆಗ್ರಹಿಸಿದೆ. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಸುನಿಲ್ ವಾಳಕ್ಕೋಡ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಎಂ.ವಿ. ಅಧ್ಯಕ್ಷತೆ ವಹಿಸಿ ದರು. ರಾಜ್ಯ ಉಪಾಧ್ಯಕ್ಷ ಮಧು ಸೂಧನನ್ ಕೆ.ಪಿ, ರಾಜ್ಯ ಕಾರ್ಯದರ್ಶಿ ವಿ.ಕೆ. ರಜಿ ಕುಮಾರ್ ಮಾತನಾಡಿದರು. ಕೆ. ಮನೋಜ್ ಕುಮಾರ್ ಸ್ವಾಗತಿಸಿ, ಸುರೇಶ್ ಪಿ. ವಂದಿಸಿದರು.

RELATED NEWS

You cannot copy contents of this page