ಉಪ್ಪಳ: ಉಪ್ಪಳ ವಿಲ್ಲೇಜ್ ಕಚೇರಿಯನ್ನು ವಿಭಜಿಸಿ, ಅಗತ್ಯದ ನೌಕರರನ್ನು ನೇಮಕ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಮಂಗಲ್ಪಾಡಿ ಜನಪರವೇದಿ ಕಂದಾಯ ಸಚಿವರಿಗೆ ಮನವಿ ನೀಡಿದೆ. ಪ್ರಸ್ತುತ ನಾಲ್ಕು ವಿಲ್ಲೇಜ್‌ಗಳು ಒಳಗೊಂಡಿರುವುದಾಗಿದೆ ಉಪ್ಪಳ ಗ್ರೂಪ್ ವಿಲ್ಲೇಜ್. ಉಪ್ಪಳ, ಮಂಗಲ್ಪಾಡಿ, ಕೋಡಿಬೈಲು, ಮುಳಿಂಜ ಎಂಬೀ ವಿಲ್ಲೇಜ್‌ಗಳು ಇದರಲ್ಲಿ ಒಳಗೊಂಡಿದೆ. ಇಲ್ಲಿನ ಜನಸಂಖ್ಯೆಗೆ ಹೊಂದಿಕೊಂಡು ನೌಕರರು ಇಲ್ಲದಿರುವುದು ದಿನಂಪ್ರತಿ ವಿಲ್ಲೇಜ್ ಕಚೇರಿಗೆ ಸಂಬಂಧಿಸಿ ಜನರ ಬೇಡಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವಾರಗಳ ಕಾಲ ಕಾಯಬೇಕಾದ ಸ್ಥಿತಿ ಇದ್ದು, ದಿನಂಪ್ರತಿ ಕಚೇರಿಗೆ ಅಲೆದಾಡಬೇಕಾಗಿ ಬರುತ್ತಿದೆ.
ಈ ವಿಲ್ಲೇಜನ್ನು ವಿಭಜಿಸಿದರೆ ಅದಕ್ಕೆ ಕಟ್ಟಡ ವ್ಯವಸ್ಥೆ ಸಿದ್ಧಪಡಿಸಲು ಸರಕಾರಿ ಸ್ಥಳ ಈಗ ಲಭ್ಯವಿದೆ. ವಿಲ್ಲೇಜ್ ವಿಭಜಿಸಬೇಕೆಂಬ ಬೇಡಿಕೆ ಹಲವು ಕಾಲದಿಂದ ಕೇಳಿ ಬರುತ್ತಿದೆ. ವರ್ಷಗಳ ಹಿಂದೆ ವಿಭಜನೆಗಿರುವ ಯತ್ನ ನಡೆಸಲಾಯಿತಾದರೂ ಅದು ಬಳಿಕ ಕಾಗದಕ್ಕೆ ಮಾತ್ರವೇ ಸೀಮಿತಗೊಂಡಿದೆ. ಉಪ್ಪಳ ವಿಲ್ಲೇಜ್ ಸ್ಮಾರ್ಟ್ ವಿಲ್ಲೇಜ್ ಆಗಿ ಮಾಡಲಾಗುವುದೆಂಬ ಸುದ್ದಿ ಪ್ರಚಾರದಲ್ಲಿತ್ತಾದರೂ ಅದು ಕೂಡಾ ಸಾಕ್ಷಾತ್ಕಾರಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾದ ಹಿನ್ನೆಲೆಯಲ್ಲಿ ಇಲ್ಲಿ ಸ್ಥಳ ಸೌಕರ್ಯವಿಲ್ಲದೆ ಜನರು ತೊಂದರೆಗೀಡಾಗುತ್ತಿದ್ದಾರೆ. ಈ ಸನ್ನಿವೇಶದಲ್ಲಿ ವಿಲ್ಲೇಜನ್ನು ವಿಭಜಿಸಿದರೆ ಮಾತ್ರವೇ ಪರಿಹಾರ ಕಾಣಲು ಸಾಧ್ಯವಿದೆ. ಆಡಳಿತ ಬದಲಾವಣೆ ಉಂಟಾದ ಕಾರಣ ಜನರ ಈ ರೀತಿಯಲ್ಲಿರುವ ಸಮಸ್ಯೆಗಳಿಗೆ ತುರ್ತು ಪರಿಹಾರ ಸರಕಾರ ಹಾಗೂ ಅಧಿಕಾರಗಳು ಕಾಣಲು ಸಿದ್ಧರಾಗಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜನಪರವೇದಿ ಮುಖಂಡರಾದ ಅಬು ತಮಾಮ್, ಸಿದ್ದಿಕ್ ಕೈಕಂಬ, ಅಶಾಫ್ ಮೂಸ ಕುಂಞಿ, ಮೊನು, ಯೂಸುಫ್ ಪಚ್ಲಂಪಾರೆ, ಸತ್ಯನ್ ಸಿ. ಉಪ್ಪಳ ಎಂಬಿವರು ಸಚಿವರನ್ನು ಭೇಟಿಯಾದ ತಂಡದಲ್ಲಿದ್ದರು.







