ಕೊಲ್ಲಂಗಾನ ಚರ್ಚ್‌ನ ಧರ್ಮಗುರು ಮಂಗಳೂರಿಗೆ  ವರ್ಗಾವಣೆ

ಕಾಸರಗೋಡು: ಕೊಲ್ಲಂಗಾನ ಸಂತ ಥೋಮಸರ ದೇವಾಲಯದ ಧರ್ಮಗುರುಗಳಾಗಿ ಕಳೆದ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಫಾ| ರಿತೇಶ್ ರೋಡ್ರಿಗಸ್ ಮಂಗಳೂರಿನ ಕಾಸ್ಟಿಯಾ ದೇವಾಲಯದ ಜವಾಬ್ದಾರಿ ವಹಿಸಲು ನಾಳೆ ತೆರಳಲಿದ್ದಾರೆ. ಕೊಲ್ಲಂ ಗಾನ ಸಂತ ಥೋಮಸರ ದೇವಾಲಯದಲ್ಲಿ 7 ವರ್ಷಗಳ ಕಾಲಸೇವೆ ಸಲ್ಲಿಸಿದ ವಂ| ಫಾ| ಡೇನಿಯಲ್ ಡಿ’ಸೋಜಾರವರು ಸಿದ್ಧಕಟ್ಟೆ  ಧರ್ಮಕೇಂದ್ರಕ್ಕೆ ವರ್ಗಾವಣೆಗೊಂಡಾಗ ಅವರ  ಸ್ಥಾನದಲ್ಲಿ ವಂ| ರಿತೇಶ್ ರೋಡ್ರಿಗಸ್ ನೇಮಕಗೊಂಡಿದ್ದರು.

ಕೊಲ್ಲಂಗಾನ ಚರ್ಚ್‌ನ ೨೫ನೇ ವಾರ್ಷಿಕಾಚರಣೆ ಇವರ ನೇತೃತ್ವದಲ್ಲಿ ನಡೆದಿದ್ದು, ಬೆಳ್ಳಿಹಬ್ಬ ಚಟುವಟಿಕೆಗಳು ಒಂದು ವರ್ಷವಿಡೀ ಜರಗಿತ್ತು. ಅಲ್ಲದೆ ಚರ್ಚ್‌ನಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಇವರು ನೇತೃತ್ವ ನೀಡಿದ್ದರು.

RELATED NEWS

You cannot copy contents of this page