ಕೂಲಿ ಕಾರ್ಮಿಕ ನಿಧನ

ಪೈವಳಿಕೆ: ಚಿಪ್ಪಾರು ಶಾಲೆ ಬಳಿಯ ನಿವಾಸಿ ನಾರಾಯಣ ಸಿ. ಮೂಲ್ಯ (73) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೂಲಿ ಕಾರ್ಮಿಕನಾಗಿದ್ದರು. ಇವರ ಪತ್ನಿ ಚಂದ್ರಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರೋಹಿಣಿ, ಮಮತಾ, ಜಯಶ್ರೀ, ಅಳಿಯಂದಿರಾದ ಸೀತಾರಾಮ, ಶೇಖರ, ಜಗದೀಶ, ಸಹೋದರ ಚಂದಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೃಷ್ಣ, ಸಹೋದರಿ ಕಮಲ ಈ ಹಿಂದೆ ನಿಧನರಾಗಿದ್ದಾರೆ.

ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಬಿಜೆಪಿ ಮುಖಂಡ ಶಂಕರ್ ಭಟ್ ಮಳಿವು, ಪಂಚಾಯತ್ ಸದಸ್ಯೆ ಯಶೋಧಾ ಚಿಪ್ಪಾರು, ಮಾಜಿ ಸದಸ್ಯ ನಾರಾಯಣ ಶೆಟ್ಟಿ ಪೈವಳಿಕೆ, ಫಾರೂಕ್ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page