ಶಾಲೆಯಿಂದ ಲ್ಯಾಪ್‌ಟಾಪ್ ಕಳವು: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬದಿಯಡ್ಕ: ಶಾಲೆಯಿಂದ ಲ್ಯಾಪ್‌ಟಾಪ್  ಕಳವುಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ಪೈವಳಿಕೆ ನಿವಾಸಿ ರಾಧಾಕೃಷ್ಣ (42) ಎಂಬಾತನನ್ನು ಬದಿಯಡ್ಕ ಪೊಲೀಸ್ ಠಾಣೆ ಎಎಸ್‌ಐ ಪ್ರಸಾದ್ ನೇತೃತ್ವದಲ್ಲಿ ಕರ್ನಾಟಕದ ಪುತ್ತೂರಿನಿಂದ ಬಂಧಿಸಲಾಗಿದೆ. ೨೦೧೯ರಲ್ಲಿ ಪೆರಡಾಲ ಶಾಲೆಯ ಬೀಗ ಮುರಿದು ಒಳನುಗ್ಗಿ ಲ್ಯಾಪ್‌ಟಾಪ್ ಕಳವು ಗೈದ ಪ್ರಕರಣದಲ್ಲಿ ರಾಧಾಕೃಷ್ಣ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಸೆರೆಗೀಡಾದ ಈತ ಜಾಮೀನು ಪಡೆದು ಹೊರ ಬಂದಿದ್ದನು. ಬಳಿಕ ನ್ಯಾಯಾಲಯದಲ್ಲಿ ಹಾಜರಾಗದೆ  ತಲೆಮರೆಸಿಕೊಂಡಿದ್ದನು.

ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿರುವ ವೇಳೆ ಈತ ಪುತ್ತೂರಿನಲ್ಲಿರುವ ಬಗ್ಗೆ ಬದಿಯಡ್ಕ ಠಾಣೆ ಇನ್ಸ್‌ಪೆಕ್ಟರ್ ಅನೂಪ್‌ಕೃಷ್ಣರಿಗೆ ಮಾಹಿತಿ ಲಭಿಸಿತ್ತು.

ಇದರಂತೆ ಅವರ ನಿರ್ದೇಶ ಪ್ರಕಾರ ಎಎಸ್‌ಐ ಪ್ರಸಾದ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಶ್ರೀನೇಶ್, ಗೋಕುಲ್ ಎಂಬಿವರು ಕಾರ್ಯಾಚರಣೆ ನಡೆಸಿ ಆರೋಪಿ ಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page