ಸಿಡಿಲು ಆಘಾತ: ನಾಯ್ಕಾಪಿನಲ್ಲಿ ಎರಡು ಮನೆಗಳಿಗೆ ವ್ಯಾಪಕ ಹಾನಿ

ಕುಂಬಳೆ: ನಿನ್ನೆ ರಾತ್ರಿ  11 ಗಂಟೆ ವೇಳೆ ಸಂಭವಿಸಿದ  ಸಿಡಿಲಿನ ಆಘಾತದಿಂದ ಎರಡು ಮನೆಗಳಿಗೆ ಹಾನಿಯುಂಟಾ ಗಿದೆ. ನಾಯ್ಕಾಪು ರಾಮೇಶ್ವರನಗರದ ಶಕುಂತಲ, ಯಮುನ ಎಂಬಿವರ ಮನೆಗಳಿಗೆ ಸಿಡಿಲಿನ ಆಘಾತವುಂ ಟಾಗಿದೆ.  ಮನೆಗಳ ವಿದ್ಯುತ್ ಮೈನ್‌ಸ್ವಿಚ್, ಫ್ಯಾನ್ ಸಹಿತ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ.  ಗೋಡೆ ಬಿರುಕುಬಿಟ್ಟಿದೆ. ಶಕುಂತಲರ ಮನೆಯಲ್ಲಿ ಘಟನೆ ವೇಳೆ ಮಕ್ಕಳ ಸಹಿತ ಐದು ಮಂದಿ, ಯಮುನರ ಮನೆಯಲ್ಲಿ ಮೂರು ಮಂದಿ ಇದ್ದರು.  ಶಬ್ದ ಕೇಳಿ ಇವರು ಮನೆಯಿಂದ ಹೊರಗೆ ಓಡಿದುದರಿಂದ ಅಪಾಯ ದಿಂದ ಪಾರಾಗಿದ್ದಾರೆ. ಪಂಚಾಯತ್ ಸದಸ್ಯ ಅಜಿತ್ ಸ್ಥಳಕ್ಕೆ ಭೇಟಿ ನೀಡಿದರು.

RELATED NEWS

You cannot copy contents of this page