ಪೆಟ್ರೋಲ್, ಡೀಸೆಲ್ ಬೆಲೆ  ಶೀಘ್ರ ಇಳಿಕೆ ಸಾಧ್ಯತೆ

ನವದೆಹಲಿ: ದೇಶದಲ್ಲಿ ಈ ತಿಂಗಳ 20ರೊಳಗಾಗಿ ಪೆಟ್ರೋಲ್ ಮತ್ತು  ಡೀಸೆಲ್ ಬೆಲೆ ಇಳಿಸುವ ಪೂರ್ವ ಸುಳಿವನ್ನು ಕೇಂದ್ರ ಸರಕಾರ ನೀಡಿದೆ. ಮಳೆಗಾಲದ ಸಂಸತ್ ಅಧಿವೇಶನ ಆರಂಭಗೊಳ್ಳುವ ಮೊದಲೇ ಬೆಲೆ ಇಳಿಕೆ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಅಮೆರಿಕ-ಇರಾನ್ ನಡುವಿನ ಯುದ್ಧ ದಿಂದ ಜಾಗತಿಕ ತೈಲ ಮತ್ತು ಎಲ್‌ಪಿಜಿ ಅನಿಲದ  ಪೂರೈಕೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಭಾರತ ಮಾತ್ರವಲ್ಲ ಇತರ ಹಲವು ದೇಶಗಳು ಇಂಧನಗಳ ಭಾರಿ ಕೊರತೆ ಎದುರಿಸತೊಡಗಿತ್ತು. ಮಾತ್ರವಲ್ಲ ಅದರ ಹೆಸರಲ್ಲಿ ಇಂಧನಗಳ ಬೆಲೆ ಪದೇ ಪದೇ ಆಗಸಕ್ಕೇರುತ್ತಾ ಸಾಗುತ್ತಿತ್ತು. ಈಗ ಯುದ್ದ ಮುಗಿದು ಸ್ಥಿತಿ ಶಾಂತಗೊಂಡ ಬೆನ್ನಲ್ಲೇ ಕಚ್ಛಾ ತೈಲ ಬೆಲೆಯಲ್ಲಿ  ಬ್ಯಾರಲ್‌ಗೆ 72 ಡಾಲರ್‌ನಷ್ಟು ಇಳಿದಿದೆ. ಇದ ಕಳೆದ  26 ವರ್ಷಗಳಲ್ಲಿ ಅತೀ ದೊಡ್ಡ ಕಡಿತವಾಗಿದೆ. ಸೌದಿ ಅರೇಬಿಯದ ಆರಾಮ್ಕೊ ಕಂಪೆನಿ ಏಷ್ಯಾಕ್ಕೆ  ಅರಬ್ ಲೈಟ್ ಕಚ್ಛಾ ತೆಲದ ಬೆಲೆಯಲ್ಲ್ಲಿ ಬಾರಲ್‌ಗೆ 11 ಡಾಲರ್ ನಷ್ಟು ಕಡಿತಗೊಳಿಸಿದೆ. ಭಾರತವು ತನ್ನ ತೈಲ ಅಗತ್ಯಗಳ ಗಮನಾರ್ಹ ಭಾಗವನ್ನು ಸೌದಿ ಅರೇಬಿಯಾದಿಂದ ಆಮದುಮಾಡುತ್ತಿದೆ.  ಸೌದಿ ಅರೇಬಿಯ ಮಾತ್ರವಲ್ಲ ಕಚ್ಛಾ ತೈಲ ಪೂರೈಕೆ ನಡೆಸುವ ಇತರ ದೇಶಗಳು ಈಗ  ಬೆಲೆ ಇಳಿಸತೊಡಗಿದ್ದು ಅದರ ಪ್ರಯೋಜನ ಭಾರತಕ್ಕೂ ಲಭಿಸಲಿದೆ. ಯುದ್ಧದ ಬಳಿಕ ಹಾರ್ಮುಜ್ ಜಲಸಂಧಿ ಈಗ ಪೂರ್ಣ ಪ್ರಮಾಣದಲ್ಲಿ ತೆರೆಯಲ್ಪಟ್ಟಿದ್ದು ಇದರಿಂದಾಗಿ ಈ ದಾರಿಯಾಗಿ ಹಡಗುಗಳಲ್ಲಿ ಕಚ್ಛಾ  ತೈಲ ಸೇರಿದಂತೆ ಇತರ ಸರಕು ಸರಬರಾಜು ಗಳು ಈಗ ಸಾಮಾನ್ಯ ಸ್ಥಿತಿಗೆ ಮರಳಿದೆ.

ಭಾರತವು ತನ್ನ ಕಚ್ಛಾ ತಲದ ಬಹುಪಾಲು ಭಾಗವನ್ನು ಆಮದುಗಳ  ಮೂಲಕ ಪೂರೈಸುತ್ತಿದೆ. ಆದ್ದರಿಂದ ಅಂತಾರಾಷ್ಟ್ರೀಯ ಬೆಲೆಗಳಲ್ಲ್ಲಿ ಈಗ ಕುಸಿತ ಉಂಟಾಗಿರುವುದರ ಲಾಭ ಭಾರತಕ್ಕೂ ಲಭಿಸತೊಡಗಿದೆ.  ಆ ಹಿನ್ನೆಲೆಯಲ್ಲಿ ಈ ತಿಂಗಳ 20ರೊಳಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವ ಪೂರ್ವಸುಳಿವನ್ನು  ಕೇಂದ್ರ ಸರಕಾರ ಈಗ ನೀಡಿದೆ.  ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಚ್ಛಾ ತೈಲದ ಮೇಲೆ ಮಾತ್ರವಾಗಿ  ಅವಲಂಬಿತವಾಗಿಲ್ಲ. ತೆರಿಗೆಗಳು, ರೂಪಾಯಿ ಡಾಲರ್ ವಿನಿಮಯ ದರ ಮತ್ತು ಸರಕಾರಿ ನೀತಿಗಳು ಬೆಲೆ ನಿರ್ಣಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

RELATED NEWS

You cannot copy contents of this page