ಕಾಸರಗೋಡು: ಸ್ಮಾರ್ಟ್ ಫೋನ್ ಸಹಿತದ ಆಧುನಿಕ,ತಾಂತ್ರಿಕ ವ್ಯವಸ್ಥೆಗಳನ್ನು ವಿನೋದಕ್ಕಾಗಿ ಮಾತ್ರವಲ್ಲದೆ ಶಿಕ್ಷಣಕ್ಕಾಗಿಯೂ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳ ಬೇಕೆಂದು, ತಾಂತ್ರಿಕ ಶಿಕ್ಷಣ ದುರುಪಯೋಗವಾಗುತ್ತಿಲ್ಲವೆಂಬುದನ್ನು ಹೆತ್ತವರು ಖಚಿತಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು.
ಮಧೂರು ಎಸ್‌ಸಿ-ಎಸ್‌ಟಿ ಪಂಚಾಯತ್ ಸಮಿತಿ ಕೂಡ್ಲು ಗೋಪಾಲಕೃಷ್ಣ ಶಾಲೆಯಲ್ಲಿ ಆಯೋಜಿಸಿದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗಿರುವ ಪುಸ್ತಕ ವಿತರಣೆ ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಳೆದ 12ವರ್ಷದಿಂದ ಶಿಕ್ಷಣ ಸಹಿತದ ಮೂಲಭೂತ ವಲಯದಲ್ಲಿ ಬಹಳ ದೊಡ್ಡ ಸಾಧನೆ ಕೇಂದ್ರ ಸರಕಾರ ನಡೆಸಿದೆ. ಎಸ್‌ಸಿ-ಎಸ್‌ಟಿ ಜನ ವಿಭಾಗಗಳನ್ನು ಆರ್ಥಿಕವಾಗಿ ಸಬಲಗೊಳಿಸುವುದು ಎಂಬ ಉದ್ದೇಶವನ್ನು ನರೇಂದ್ರ ಮೋದಿ ಸರಕಾರ ಯಶಸ್ವಿಯಾಗಿ ಜ್ಯಾರಿಗೊಳಿಸಿದೆಯೆಂದು ಅಶ್ವಿನಿ ಅಭಿಪ್ರಾಯಪಟ್ಟರು.
ಇದೇ ವೇಳೆ ಭಾರತ ಸರಕಾರದ ಟ್ರೈಬಲ್ ಅಫೇರ್ಸ್ ಸಚಿವಾಲಯದ ಬಿರ್ಸಾಮುಂಡ ಅನ್‌ಸಂಘ್ ಹೀರೋ ಪ್ರಶಸ್ತಿಗಳಿಸಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಳ್ಕೂರು ಅವರನ್ನು ಅಶ್ವಿನಿ ಅಭಿನಂದಿಸಿದರು. ಮಧೂರು ಪಂಚಾಯತ್ ಸಮಿತಿ ಎಸ್‌ಸಿ-ಎಸ್‌ಟಿ ಮೋರ್ಛಾ ಮೋಹನ್ ಕಾಳ್ಯಂಗಾಡ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ, ಜಿ.ಪಂ.ಸದಸ್ಯ ರಾಮಪ್ಪ ಮಂಜೇಶ್ವರ, ಮಧೂರು ಪಂಚಾಂiiತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಉಪಾಧ್ಯಕ್ಷ ಭಾನುಪ್ರಕಾಶ್, ಸುಕುಮಾರ ಕುದ್ರೆಪ್ಪಾಡಿ ಸಹಿತ ಹಲವು ಮುಖಂಡರು ಭಾಗವಹಿಸಿದರು.







