ಮಧೂರು ಮಿತ್ರ ಕಲಾವೃಂದದಿಂದ ಬಹುಭಾಷಾ ಕವಿ ಸಂಗಮ ಮೇ 2ರಂದು

ಮಧೂರು:  ಮಿತ್ರ ಕಲಾವೃಂದ  ಮಧೂರು ಇದರ ಸುವರ್ಣ ಸಂಭ್ರಮ ದಂಗವಾಗಿ  ಬಹುಭಾಷಾ ಕವಿ ಸಂಗಮ ಮೇ 2ರಂದು ಬೆಳಿಗ್ಗೆ 10ರಿಂದ ಮಧೂರು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿ ವಿಟ್ಲ ಅರಮನೆಯ ಸೀತಾಲಕ್ಷ್ಮಿ ವರ್ಮ ದೀಪ ಪ್ರಜ್ವಲನೆ ನಡೆಸುವರು.  ಹಿರಿಯ ಸಾವಿತಿ ವಿ.ಬಿ. ಕುಳಮರ್ವ ಅಧ್ಯಕ್ಷತೆ ವಹಿಸುವರು. ಕವಿ ರಾಧಾಕೃಷ್ಣ ಕೆ ಉಳಿಯಡತ್ತಡ್ಕ ಪ್ರಸ್ತಾವನೆ ನಡೆಸುವರು. ಚುಟುಕು ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಆಶಯ ನುಡಿಯುವರು. ಕ.ಸಾ.ಪ ಅಧ್ಯಕ್ಷ ಡಾ| ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಯಾಗಿರುವರು. ಜಿಲ್ಲಾ ಕನ್ನಡ ಲೇಖಕರ ಸಂಘದ ಕೋಶಾಧ್ಯಕ್ಷ ವಿಶಾಲಾಕ್ಷ ಪುತ್ರಕಳ ಶುಭಾ ಶಂಸನೆಗೈಯ್ಯುವರು. ಜಿಲ್ಲೆಯ ಪ್ರಸಿದ್ಧ ಕವಿಗಳಿಂದ ಕನ್ನಡ, ತುಳು, ಮಲೆಯಾಳಂ, ಕೊಂಕಣಿ, ಮರಾಟಿ, ಕರಾಡ, ಹವ್ಯಕ, ಶಿವಳ್ಳಿತುಳು, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸ್ವರಚಿತ ಕವನ ವಾಚನ ನಡೆಯಲಿದೆ.

RELATED NEWS

You cannot copy contents of this page