ಮಧೂರು: ಪ್ರಸಿದ್ಧ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಮಂದಿ ತಲುಪುತ್ತಿದ್ದು, ಈ ಪ್ರದೇಶದಲ್ಲೇ ಇತರ ಹಲವಾರು ಕ್ಷೇತ್ರಗಳು, ಮಸೀದಿಗಳು, ಸರಕಾರಿ ಶಾಲೆಗಳು, ಆಸ್ಪತ್ರೆಗಳು, ಪಂಚಾಯತ್ ಕಚೇರಿ, ವಿಲ್ಲೇಜ್ ಕಚೇರಿ ಮೊದಲಾದ ಸರಕಾರಿ ಕಚೇರಿಗಳು ನೆಲೆಗೊಂಡಿವೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಕೆಎಸ್ಆರ್ಟಿಸಿ ಬಸ್ ಆರಂಭಿಸಬೇ ಕೆಂದು ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಸಮಿತಿ ಮಧೂರು ಘಟಕ ಸಂಬಂಧಪಟ್ಟವರಲ್ಲಿ ಆಗ್ರಹಿಸಿದೆ.
ದಿನಂಪ್ರತಿ ವಿವಿಧ ಅಗತ್ಯಗಳಿಗಾಗಿ ಸಾವಿರಾರು ಮಂದಿ ಸಂಚರಿಸುವ ಈ ರೂಟ್ನಲ್ಲಿ ಈಗ ಖಾಸಗಿ ಬಸ್ ಮಾತ್ರವೇ ಸಂಚರಿಸುತ್ತಿದೆ. ಕೊರೊನಾಕ್ಕೂ ಮುಂಚಿತ ಈ ಭಾಗಕ್ಕೆ ಕೆಎಸ್ಆರ್ಟಿಸಿ ಸಂಚರಿಸುತ್ತಿತ್ತು. ಈಗ ಮತ್ತೆ ಅದನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿ ಸಮಿತಿ ಆಗ್ರಹಿಸಿದೆ.







