ಮಧೂರು ಕ್ಷೇತ್ರ ಜಾತ್ರೆ :ಸುಡುಮದ್ದು ಪ್ರದರ್ಶನ ಇಂದು

ಮಧೂರು: ಇಲ್ಲಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮ ಹೋತ್ಸವದಂಗವಾಗಿ ಇಂದು ಬೆಳಿಗ್ಗೆ ಉತ್ಸವಬಲಿ, ದೀಪೋತ್ಸವ, ದರ್ಶನಬಲಿ ನಡೆಯಿತು. ಮಧ್ಯಾಹ್ನ 12ಕ್ಕೆ ತುಲಾ ಭಾರಸೇವೆ, 12.30  ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾ ಧನೆ, ರಾತ್ರಿ 7ಕ್ಕೆ ಉತ್ಸವಬಲಿ, ಉಳಿಯ ತ್ತಡ್ಕ ದಲ್ಲಿರುವ ಮೂಲಸ್ಥಾನಕ್ಕೆ ದೇವರ ಶೋಭಾಯಾತ್ರೆ ತೆರಳಲಿದೆ. ಈ ವೇಳೆ ಕಾಸರಗೋಡು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯವರಿಂದ ತಾಲೀಮು ಪ್ರದರ್ಶನವಿರುವುದು. 8.3೦ಕ್ಕೆ ಉಳಿಯತ್ತಡ್ಕ ಮೂಲಸ್ಥಾನ ದಲ್ಲಿ ಕಟ್ಟೆಪೂಜೆ, 10ಕ್ಕೆ ಬೆಡಿಕಟ್ಟೆಯಲ್ಲಿ ಪೂಜೆ, ಅನಂತರ ಸುಡುಮದ್ದು ಪ್ರದರ್ಶನ, 12.30 ಶಯನ, ಕವಾಟಬಂಧನ ನಡೆಯಲಿರುವುದು.

RELATED NEWS

You cannot copy contents of this page