ಮುನ್ನೂರ್: ಚಿಕಿತ್ಸಾ ಧನ ಸಹಾಯ ವಿತರಣೆ

ಪೆರ್ಮುದೆ:  ಸೀತಾಂಗೋಳಿಯ ಎಯ್ಯೂರ್‌ನ ರಾಜೇಶ್ ಕುಲಾಲರ ಪತ್ನಿ ರುಕ್ಮಿಣಿಯವರಿಗೆ ಚಿಕಿತ್ಸಾ ಧನ ಸಹಾಯವಾಗಿ ಮುನ್ನೂರ್ ಸಾಲಿಯಾನ್ ಕುಟುಂಬಸ್ಥರು ಮತ್ತು ಸಮಿತಿ ಸದಸ್ಯರು ಸಂಗ್ರಹಿಸಿದ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಮುನ್ನೂರ್ ತರವಾಡಿನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಮ್ಮು ಮಾಸ್ತರ್ ಕೋರಿಕ್ಕಾರ್ ಧನ ಸಹಾಯ ಹಸ್ತಾಂತರಿಸಿದರು. ರುಕ್ಮಿಣಿ ಕುಂಬಳೆಯ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ದೈವಸ್ಥಾನ ಮೂಲ್ಯಣ್ಣ, ಚಂದ್ರಹಾಸ ಮಲೆರಿಕೆ, ಈಶ್ವರ ಮೂಲ್ಯ, ಆಡಳಿತ ಸಮಿತಿ ಅಧ್ಯಕ್ಷ ರಾಮ ಮೂಲ್ಯ, ನವೀನ್ ಕಾಶಿ, ಪದ್ಮನಾಭ ಮಂಚಿ, ಅಮ್ಮು ಮೂಲ್ಯ ಮುನ್ನೂರ್, ಸತೀಶ ಕುಂಬಳೆ, ಶಿವರಾಮ ಕಳತ್ತೂರು, ನಾಗೇಶ್ ಮರೊಳಿ, ಸುಂದರಿ ಕನಿಯಾಲ, ನಾರಾಯಣ, ಶಂಕರ ಎಯ್ಯೂರ್, ವಿಶ್ವನಾಥ್ ಎರುಗಲ್ಲು, ಅರುಣ್ ಟಿ. ಮೂಲ್ಯ ಮಂಗಳೂರು, ಅಜಿತ್ ಕಿಳಿಂಗಾರು, ಕೇಶವ ಪಾದೇಶ್ವರ ಭಾಗವಹಿಸಿದರು. ಮುನ್ನೂರ್ ಸಾಲಿಯಾನ್ ಕುಲಾಲ ನಾಗಕ್ಷೇತ್ರ ಮಲರಾಯ ದೈವಸ್ಥಾನದ ವತಿಯಿಂದ ಈ ರೀತಿ ಆರನೇ ಬಾರಿ ಚಿಕಿತ್ಸಾ ಧನ ಸಹಾಯ ವಿತರಿಸಲಾಗಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

You cannot copy contents of this page