ಮೊಗ್ರಾಲ್ ಮಖಾಂ ಉರೂಸ್: ಕ್ಷೇತ್ರಕ್ಕೆ ತಲುಪಿ  ಆಮಂತ್ರಣ ನೀಡಿದ ಮಸೀದಿ ಪದಾಧಿಕಾರಿಗಳಿಗೆ ಸ್ವಾಗತ

ಮೊಗ್ರಾಲ್: ಮೊಗ್ರಾಲ್ ಮಖಾಂ ಉರೂಸ್ ನಾಳೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳು ಗಾಂಧಿನಗರ ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿ ಕ್ಷೇತ್ರ ಸಮಿತಿ ಪದಾಧಿಕಾರಿಗಳನ್ನು ಉರೂಸ್‌ಗೆ ಆಹ್ವಾನಿಸಿದರು. ಹಲವು ಕಾಲಗಳಿಂದ ಇಲ್ಲಿ ಕಾಯ್ದುಕೊಂಡಿರುವ ಒಗ್ಗಟ್ಟಿನ ಪ್ರದರ್ಶನವಾಗಿದೆ ಇದು. ಜಿಲ್ಲೆಯ ವಿವಿಧ ಭಾಗಗಳಿಂದ ಕಾಣಿಕೆ ಸಹಿತ ಜನರು ಒಂದಾಗಿ ಉರೂಸ್‌ಗಾಗಿ ಮಸೀದಿ ಅಂಗಣಕ್ಕೆ ತಲುಪುತ್ತಾರೆ. ಅವರನ್ನು ಉರೂಸ್ ಸಮಿತಿ ಪದಾಧಿಕಾರಿಗಳು ಸ್ವಾಗತಿಸುತ್ತಿದ್ದಾರೆ.

ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿದ ಮಸೀದಿ ಸಮಿತಿ ಪದಾಧಿಕಾರಿಗಳಾದ ಹಾದಿ ತಂಙಳ್, ಬಿ.ಎನ್. ಮೊಹಮ್ಮದಲಿ, ಇಬ್ರಾಹಿಂ ಕೊಪ್ಪಳ, ಯು.ಎಂ. ಫಸಲು ರಹ್ಮಾನ್, ಜಲೀಲ್ ಕೊಪ್ಪಳ, ಅಶ್ರಫ್ ಬಿ.ಕೆ., ಮುಸ್ತಫ ಕೊಪ್ಪಳ, ಸಮದ್ ಕಡಪ್ಪುರಂ, ಅಶ್ರಫ್ ಜಡೇಜ ಎಂಬಿವರನ್ನು ದೈವಸ್ಥಾನ ಸಮಿತಿ ಪದಾಧಿಕಾರಿಗಳಾದ ಶ್ರೀನಿವಾಸ್, ರಮೇಶ್ ಗಾಂಧಿನಗರ್, ಗೋಪಾಲನ್, ಚಿದಾನಂದ, ದಿನೇಶನ್, ಲಕ್ಷ್ಮಣ, ಮಹೇಶ್ ಕುಮಾರ್, ದಿಲೀಪ್ ಕುಮಾರ್, ಸುರೇಶ್, ರಾಮ್‌ದಾಸ್, ಶೈಲೇಶ್, ಪ್ರಭಾಕರನ್, ಉದಯಕುಮಾರ್, ಗೋಪಾಲನ್, ಪ್ರಮೋದ್ ಕುಮಾರ್, ಅನಂತ ಸೇರಿ ಸ್ವಾಗತಿಸಿದರು.

RELATED NEWS

You cannot copy contents of this page