ಹೊಸಂಗಡಿ ರೈಲ್ವೇ ಗೇಟ್ ಸಮೀಪ ಕೆಸರುಗದ್ದೆಯಂತಾಗಿ ಸಾರ್ವಜನಿಕರಿಗೆ ಸಮಸ್ಯೆ

ಮಂಜೇಶ್ವರ: ಹೊಸಂಗಡಿ ಪೇಟೆಯ ಸರ್ವೀಸ್ ರಸ್ತೆ ಸಮೀಪ ರೈಲ್ವೇ ಗೇಟ್ ಬಳಿ ಬಸ್ ತಂಗುದಾಣ ಹಾಗೂ ರಿಕ್ಷಾ ನಿಲ್ದಾಣ ಕೆಸರಿನಿಂದ ಶೋಚನೀಯಾವಸ್ಥೆಯಲ್ಲಿದ್ದು, ಸಾರ್ವಜನಿಕರು ಸಮಸ್ಯೆಗೀಡಾಗಿದ್ದಾರೆ. ಈ ಪರಿಸರದಲ್ಲಿ ಬೇಸಿಗೆಯಲ್ಲಿ ಪಂಚಾಯತ್‌ನಿಂದ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿದೆ. ಇದರಿಂದ ರಿಕ್ಷಾ ನಿಲ್ದಾಣ ಹಾಗೂ ಪರಿಸರ ಗೂಡಂಗಡಿ ವ್ಯಾಪಾರಿಗಳಿಗೆ ನೆಮ್ಮದಿಯನ್ನುಂಟು ಮಾಡಿತ್ತು. ಆದರೆ ಈಗ ಮಳೆಗೆ ಈ ಪರಿಸರ ಪೂರ್ತಿ ಕೆಸರಿನಿಂದ ಆವೃತ್ತಿಗೊಂಡು ಸಮಸ್ಯೆ ಉಂಟಾಗಿದೆ. ನಡೆದಾಡುವ ವೇಳೆ ಚಪ್ಪಲಿ ಹೂತು ಹೋಗುವುದು, ಜಾರಿ ಬೀಳುವುದು, ಬಟ್ಟೆಯಲ್ಲಿ ಕೊಳೆ ಉಂಟಾಗುತ್ತಿರುವ ಘಟನೆಗಳು ನಡೆಯುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ರೈಲ್ವೆ ಗೇಟ್ ಒಳ ಪ್ರವೇಶಿಸುವ ಬಸ್‌ಗಾಗಿ ಕಾಯುವವರು ಕೆಸರಿನಲ್ಲಿ ನಿಲ್ಲುವಂತ ಅವಸ್ಥೆ ಉಂಟಾಗಿದ್ದು, ಸಂಬಂಧಪಟ್ಟವರು ಈ ಪರಿಸರದಲ್ಲಿ ಜಲ್ಲಿ ಹುಡಿಯಾದರೂ ಹಾಕಿ ಕೆಸರಿನಿಂದ ಮುಕ್ತಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page