ಸಹೋದರಿಯ ಕೊಲೆಗೆ ಯತ್ನಿಸಿದ ಪ್ರಕರಣ: ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಸಹೋದರಿಯ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಅಡೂರು ಚಾಮೆಕೊಚ್ಚಿಯ ಶ್ರೀಕೃಷ್ಣ ನಿಲಯದ ರಘುರಾಮ ರಾವ್‌ರ ಪುತ್ರ ಕೃಷ್ಣ ಪ್ರಸಾದ್ (34) ಮೃತಪಟ್ಟ ವ್ಯಕ್ತಿ. ಮೊನ್ನೆ ಸಂಜೆ ಮನೆಯೊಳಗೆ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಮನೆಯೊಳಗಿನಿಂದ ದುರ್ನಾತ ಬೀರುತ್ತಿರುವ ಅನುಭವಗೊಂಡು ಸ್ಥಳೀಯರು ಅಲ್ಲಿಗೆ ತಲುಪಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ವಾರ್ಡ್ ಸದಸೆ ವಿದ್ಯಾ ಮಹೇಶ್ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡ ಲಾಯಿತು. ಸಹೋದರಿಯನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಕೃಷ್ಣ ಪ್ರಸಾದ್ ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.  ಅನಂತರ ತಂದೆ, ತಾಯಿ ಪದ್ಮಾವತಿ, ಸಹೋದರಿ ಶ್ರೀಲತ ಬೆಂಗಳೂರಿ ನಲ್ಲಿರುವ ಇವರ ಮಕ್ಕಳಾದ ಸಹನ ಹಾಗೂ ವೈಶಾಲಿಯ ಜೊತೆ ವಾಸಿಸುತ್ತಿದ್ದರು.  ವಿಷ ಸೇವಿಸಿರುವುದೇ ಕೃಷ್ಣ ಪ್ರಸಾದ್‌ನ ಸಾವಿಗೆ ಕಾರಣವಾಗಿದೆಯೆಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page