ಕೊಲೆಗೀಡಾದ ಬಿ.ಕೆ. ಸುರೇಶ್‌ರಿಗೆ  ನಾಡಿನ ಅಂತಿಮ ನಮನ

ಮಾರ್ಪನಡ್ಕ: ಕುಂಬ್ಡಾಜೆ ಬೆದ್ರಕೂಡ್ಲು ನಿವಾಸಿ, ಎಸ್‌ಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ, ಎಸ್‌ಸಿ ಮೋರ್ಚಾ ಬದಿಯಡ್ಕ ಮಂಡಲ ಮಾಜಿ ಅಧ್ಯಕ್ಷ ಬಿ.ಕೆ. ಸುರೇಶ್‌ರಿಗೆ ಭಾರೀ ಜನಸಂದಣಿಯ ಮೂಲಕ ಬಿಜೆಪಿ ಜಿಲ್ಲಾ ಸಮಿತಿ ಅಂತಿಮ ನಮನ ಸಲ್ಲಿಸಿದೆ.

ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ಆರ್‌ಎಸ್‌ಎಸ್ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್, ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕೆ.ಕೆ.ಪುರ, ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಸುನಿಲ್ ಪಿ.ಆರ್, ಮನುಲಾಲ್ ಮೇಲತ್, ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲ ಕೃಷ್ಣನ್,  ಪ್ರಧಾನ ಕಾರ್ಯದರ್ಶಿ  ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಮುಳಿಯಾರು ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಕುಂಬ್ಡಾಜೆ ಪಂ. ಅಧ್ಯಕ್ಷೆ ಯಶೋಧ ಎನ್, ಕಾರಡ್ಕ ಪಂಚಾಯತ್ ಸಮಿತಿ ಅಧ್ಯಕ್ಷ ವಸಂತ ಕೆ. ಅಂತಿಮ ನಮನ ಸಲ್ಲಿಸಿದರು. ಕುಂಬ್ಡಾಜೆ ಪಂಚಾಯತ್‌ನ ಮಾರ್ಪನಡ್ಕದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ವೇಳೆ ವಿವಿಧ ವಲಯಗಳ ಜನರು ತಲುಪಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತದೇಹವನ್ನು ಮನೆ ಹಿತ್ತಿಲಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಕಾವಲುಗಾರನಾಗಿದ್ದ ಸುರೇಶ್‌ರನ್ನು ಮೊನ್ನೆ ರಾತ್ರಿ ಬ್ಯಾಂಕ್‌ನ ಸಮೀಪ  ಇಬ್ಬರು ಇರಿದು ಕೊಲೆಗೈದಿದ್ದರು.

RELATED NEWS

You cannot copy contents of this page