ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾಸರಗೋಡು ಎಎಸ್ಪಿ ಅಚ್ಯುತ್ ಅಶೋಕ್ ಉದ್ಘಾಟಿಸಿದರು. ಸ್ಟೇಶನ್ ಹೌಸ್ ಆಫೀಸರ್ ಎಸ್. ಅನೂಪ್ ಅಧ್ಯಕ್ಷತೆ ವಹಿಸಿದರು. ಸಿ.ಐ.ಆರ್.ಪಿ ಅನೂಪ್ ಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಬಾಟ್ಲಿಗೆ ನೀರು ತುಂಬಿಸುವುದು ಮೊದಲಾದ ಸಭೆಗಳಲ್ಲಿ ನಡೆಸಲಾಯಿತು. ಓಣಂ ಭೋಜನ ಏರ್ಪಡಿಸಲಾಗಿತ್ತು.






