ಅವಯವ ವಂಚನೆ ಪ್ರಕರಣ: ನಜೀಬ್ ಕಲ್ಲಟ್ರ, ಪತ್ನಿಯನ್ನು ಮತ್ತೆ ಕಸ್ಟಡಿಗೆ ತೆಗೆಯಲು ಪೊಲೀಸ್ ಕ್ರಮ

ಕೊಚ್ಚಿ: ಎರ್ನಾಕುಳಂ ಕೇಂದ್ರೀ ಕರಿಸಿ ನಡೆದ ಅವಯವ ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಮುಖ್ಯ ಆರೋಪಿ  ಕಾಸರಗೋಡು ಕಳನಾಡು ಚಳಿಯಂಗೋಡ್‌ನ ಮುಹಮ್ಮದ್ ನಜೀಬ್ ಕಲ್ಲಟ್ರ (53)  ಹಾಗೂ ಈತನ ಪತ್ನಿ ರಶೀದಾಳನ್ನು ಇನ್ನೊಮ್ಮೆ ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲು ಕೊಚ್ಚಿ ಸಿಟಿ ಪೊಲೀಸರು ನಿರ್ಧರಿಸಿದ್ದಾರೆ. ಆರೋಪಿಗಳನ್ನು ರೂರಲ್ ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ  ತೆಗೆದಿ ದ್ದರು. ಕಸ್ಟಡಿ ಕಾಲಾವಧಿ ನಿನ್ನೆ ಕೊನೆ ಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗಿತ್ತು. ಆರೋಪಿಗಳನ್ನು ಇನ್ನಷ್ಟು ತನಿಖೆಗೊಳಪಡಿಸುವ ಉದ್ದೇಶದಿಂದ ಅವರನ್ನು ಇನ್ನೊಮ್ಮೆ ಕಸ್ಟಡಿಗೆ ತೆಗೆದು ತನಿಖೆ ನಡೆಸಲು ಕೊಚ್ಚಿ ಸಿಟಿ ಪೊಲೀಸರು ನಿರ್ಧರಿಸಿದ್ದಾರೆ. ಅವಯವ ಸಾಗಾಟಕ್ಕೆ ಸಂಬಂಧಿಸಿ ಅಂಬಲಮೇಡ್ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತನಿಖೆಗಾಗಿ  ಈ ಇಬ್ಬರನ್ನು ಕಸ್ಟಡಿಗೆ ತೆಗೆಯಲಿರುವುದಾಗಿ ತಿಳಿದುಬಂ ದಿದೆ.  ಇವರನ್ನು ಕಸ್ಟಡಿಗೆ ಪಡೆಯಲು ಪೊಲೀಸರು ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆನ್ನಲಾಗಿದೆ. ನಜೀಬ್‌ನ ಆರ್ಥಿಕ ವ್ಯವಹಾರಗಳು ಹಾಗೂ ಫೋನ್ ಕರೆಗಳನ್ನು ಪರಿಶೀ ಲಿಸಿದಾಗ ಲಭಿಸಿದ ಮಾಹಿತಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆಯೆಂದು ತಿಳಿದಬಂದಿದೆ.

ಬಡವರನ್ನು ಬಲೆಯಲ್ಲಿ ಸಿಲುಕಿಸಿ ೧೦ ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತ ನೀಡಿ ಕೋಟ್ಯಂತ ರೂಪಾಯಿ ಪಡೆದುಕೊಂಡ ಬಳಿಕ ಕಿಡ್ನಿ ಸಹಿತ ಅವಯವಗಳನ್ನು  ವಿದೇಶಗಳ ಸಹಿತ ಹಲವರಿಗೆ ನೀಡಿರುವುದಾಗಿ  ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅವಯವ ಹಸ್ತಾಂತರದ ಹಲವು ದಾಖಲೆಗಳನ್ನು ಸಿದ್ಧಪಡಿಸಿರುವುದು ಕಾಸರಗೋಡಿನಲ್ಲಾಗಿದೆಯೆಂದೂ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಮುಹಮ್ಮದ್ ನಜೀಬ್ ಪತ್ನ ರಶೀದಾರ ಹೊರತು ಪುನ್ನತ್ತುನಾಡು ಕುಮಾರಪುರದ ಸನ್ನಿ ವರ್ಗೀಸ್, ಆತನ ಪತ್ನಿ ಸಿನಿ ವರ್ಗೀಸ್, ಚೇಲಪ್ಪುಳಂ ಕವುಂಙಪ್ಪಾ ರದ ಸನೋಜ್, ರೀಜಾ, ಸುಧೀರ್, ವಿನೋದ್ ಎಂಬಿವರನ್ನು ಬಂಧಿಸಲಾ ಗಿದೆ. ಈ ಅವಯವ ವಂಚನೆ ದಂಧೆಯಲ್ಲಿ ಇತರರು ಭಾಗಿಯಾಗಿ ದ್ದಾರೆಯೇ ಎಂದು ತಿಳಿಯಲಿರುವ ತನಿಖೆಯು ಮುಂದುವರಿಯುತ್ತಿದೆ ಯೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page