ಹೊಳೆಯ ಹೊಯ್ಗೆ ಕಳವುಗೈದು ಸಾಗಾಟ ಲಾರಿ ಮಾಲಕ ಸೆರೆ

ಕುಂಬಳೆ: ಆರಿಕ್ಕಾಡಿ ಹೊಳೆ ಯಿಂದ ಅನಧಿಕೃತವಾಗಿ ಹೊಯ್ಗೆ  ಸಾಗಿಸುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡ ಟಿಪ್ಪರ್ ಲಾರಿಯ ಆರ್‌ಸಿ ಮಾಲಕನನ್ನು ಬಂಧಿಸಲಾ ಗಿದೆ. ಆರಿಕ್ಕಾಡಿ ಕಾರ್ಳೆ ನಿವಾಸಿಯಾದ ರಶೀದ್ ಮುಹಮ್ಮದ್ ಯಾನೆ ಕಾರ್ಳೆ ರಶೀದ್ (51)ನನ್ನು ಕುಂಬಳೆ ಎಸ್‌ಐಗಳಾದ ಸಿ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ಸೇರಿ ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಎಪ್ರಿಲ್ 25ರಂದು ಮುಂಜಾನೆ ೫.೪೫ಕ್ಕೆ ಶಿರಿಯಾ ಹೊಳೆಯಿಂದ  ಕಳವುಗೈದು ಸಾಗಿಸುತ್ತಿದ್ದ ಹೊಯ್ಗೆ ಸಹಿತ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
 

RELATED NEWS

You cannot copy contents of this page