ಪೆರಡಾಲ ಬ್ಯಾಂಕ್ ಬದಿಯಡ್ಕ ಶಾಖೆ ನೂತನ ಕಟ್ಟಡಕ್ಕೆ 17ರಂದು ಸ್ಥಳಾಂತರ

ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಬದಿಯಡ್ಕ ಶಾಖೆ ಬದಿಯಡ್ಕ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶಾಸ್ತ್ರೀಸ್ ಕಾಂಪ್ಲೆಕ್ಸ್ ಕಟ್ಟಡಕ್ಕೆ ನಾಳೆ (ಈ ತಿಂಗಳ 17ರಂದು) ಸ್ಥಳಾಂತರಗೊಳ್ಳಲಿದೆ. ಅಂದು ಬೆಳಿಗ್ಗೆ ೮.೪೫ಕ್ಕೆ ನಡೆಯುವ ಕಾರ್ಯಕ್ರಮವನ್ನು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ ಉದ್ಘಾಟಿಸುವರು. ಬ್ಯಾಂಕ್‌ನ ಅಧ್ಯಕ್ಷ ಕೆ. ಗಣಪತಿ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಸಹಕಾರಿ ಇಲಾಖೆ ಅಸಿಸ್ಟೆಂಟ್ ರಿಜಿಸ್ಟ್ರಾರ್ ವಿನೋದ್ ಕುಮಾರ್ ಸಿ. ಸೇಫ್ ಲಾಕರ್ ಉದ್ಘಾಟಿಸುವರು. ಹಲವರು ಉಪಸ್ಥಿತರಿರುವರು.
 

You cannot copy contents of this page