ಸಮಾಜಘಾತಕರನ್ನು ಮಟ್ಟಹಾಕಲು ಹೊಸ ಕ್ರಿಯಾ ಯೋಜನೆ-ಎಸ್.ಪಿ ನಿತಿನ್‌ರಾಜ್

ಕಾಸರಗೋಡು: ಸಮಾಜಘಾತಕರನ್ನು ಹಾಗೂ ಅಪರಾಧ ಕೃತ್ಯಗಳನ್ನು ಮಟ್ಟಾ ಹಾಕಲು ಹೊಸ ಕ್ರಿಯಾ ಯೋಜನೆಗೆ ರೂಪು ನೀಡಲಾಗುವುದೆಂದು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ  ನಿನ್ನೆ ಕರ್ತವ್ಯ ವಹಿಸಿಕೊಂಡ ಕಾಸರಗೋಡು ಜಿಲ್ಲೆಯವರೇ ಆಗಿರುವ ಪಿ. ನಿತಿನ್‌ರಾಜ್ ಹೇಳಿದ್ದಾರೆ.

ಗೂಂಡಾಗಳ ಸದ್ದಡಗಿಸಲಾಗುವುದು. ಮಾದಕದ್ರವ್ಯ ದಂಧೆಯನ್ನು ಬೇರು ಸಹಿತ ಕಿತ್ತುಹಾಕಲು ಮೊದಲ ಆದ್ಯತೆ ನೀಡಲಾಗುವುದು ಮತ್ತು ಮಾದಕ  ವ್ಯಸನದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರ ಮಗಳನ್ನು ಹಮ್ಮಿಕೊಳ್ಳಲಾಗುವುದು. ಮಾದಕದ್ರವ್ಯ ದಂಧೆಯಲ್ಲಿ ತೊಡಗಿದವರು ಆ ಬಗ್ಗೆ ಸ್ವಯಂ ಚಿಂತನೆ ನಡೆಸಿ ಅದನ್ನು ಉಪೇಕ್ಷಿಸಬೇಕು, ಮಾದಕದ್ರವ್ಯ ವ್ಯಸನಿಗಳನ್ನು  ಅದರಿಂದ ಮುಕ್ತಿಗೊಳಿಸಲು ವೈಜ್ಞಾನಿಕ ರೀತಿಯ ಕ್ರಮಗಳನ್ನು ಆರಂಭಿಸಲಾಗುವುದು,  ಮಾದಕದ್ರವ್ಯ ವಿರುದ್ಧ ಆಪರೇಶನ್ ತೂಫಾನ್ ಎಂಬ ಹೆಸರಲ್ಲಿ ಆರಂಭಿಸ ಲಾಗಿರುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು, ಪಿಟ್‌ಎನ್‌ಡಿಪಿಎಸ್ ಸೇರಿದಂತೆ ಇತರ ಸೆಕ್ಷನ್‌ಗಳನ್ನು ಪ್ರಯೋಗಿಸಿ ಮಾದಕದ್ರವ್ಯ ಸಾಗಾಟದಾರರ  ವಿರುದ್ಧ ಕಠಿಣ ಕ್ರಮ ಜರಗಿಸಲಾ ಗುವುದು. ಮಾದಕದ್ರವ್ಯ ಪತ್ತೆ ಮಾತ್ರವಲ್ಲ  ಅದರ ಮೂಲವನ್ನು ಪತ್ತೆಹಚ್ಚಿ ನಿರ್ಮೂಲನೆಗೊಳಿಸಲಾ ಗುವುದು, ಮಾದಕದ್ರವ್ಯ ಬೆದರಿಕೆಯನ್ನು ಎದುರಿಸಲು ಶಾಲೆಗಳಲ್ಲಿ ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್‌ಗಳನ್ನು ಇನ್ನಷ್ಟು ಬಲಪಡಿಸಲಾಗುವುದು, ಎಸ್‌ಪಿಸಿಯ ಸೇವೆಯನ್ನು ಇದಕ್ಕೆ ಉಪಯೋಗಿಸ ಲಾಗುವುದು, ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರುದ್ಧ ದಿನವಾದ ಜೂನ್ 26ರಂದು  ಜನಪ್ರತಿನಿಧಿ ಗಳನ್ನು ಒಳಪಡಿಸಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಮಾದಕದ್ರವ್ಯ ವಿರುದ್ಧ ಅಭಿಯಾ ನದಲ್ಲ್ಲಿ ಶಾಲಾ ಅಧ್ಯಾಪಕ ಮತ್ತು ಶಿಕ್ಷಕ-ರಕ್ಷಕ ಸಂಘದ ಸಹಕಾರವೂ ಅನಿವಾರ್ಯವಾಗಿದೆಯೆಂದು ಅವರು ಹೇಳಿದರು.

You cannot copy contents of this page