ಕಾಸರಗೋಡು: ಉಳಿಯತ್ತಡ್ಕ-ಚೌಕಿ ರಸ್ತೆಯ ಆಜಾದ್‌ನಗರದಲ್ಲಿ ಸ್ಕೂಟರ್ ಹಾಗೂ ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪ್ಲಸ್‌ಟು ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ನೆಕ್ರಾಜೆ ನಿವಾಸಿಯೂ, ಚೌಕಿ ಆಜಾದ್‌ನಗರದಲ್ಲಿ ವಾಸಿಸುವ ಗಲ್ಫ್ ಉದ್ಯೋಗಿ ರಫೀಕ್ ಎಂಬವರ ಪುತ್ರ ಶಹಬಾಸ್ ಅಸರ್ (17) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತನ ಜೊತೆಗಿದ್ದ ಇನ್ನೋರ್ವ ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಇವರನ್ನು ಮಂಗಳೂರು ಹಾಗೂ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 10.45ರ ವೇಳೆ ಅಪಘಾತ ಸಂಭವಿ ಸಿದೆ. ರಫೀಕ್-ಅಲ್ಫೀನ ದಂಪತಿಯ ಏಕೈಕ ಪುತ್ರನಾದ ಶಹಬಾಸ್ ಅಸರ್ ವಿದ್ಯಾನಗರದ ಉದಯಗಿರಿ ಕೇಂ ದ್ರೀಯ ವಿದ್ಯಾಲ ಯದ ವಿದ್ಯಾರ್ಥಿ ಯಾಗಿದ್ದಾನೆ. ಪ್ಲಸ್‌ವನ್ ಶಿಕ್ಷಣ ಪೂರ್ತಿಗೊಳಿಸಿದ ಶಹಬಾಸ್ ಅಸರ್ ಪ್ಲಸ್‌ಟುಗೆ ತೆರಳುವ ಸಿದ್ಧತೆಯಲ್ಲಿರು ವಾಗಲೇ ಅಪಘಾತ ಸಂಭವಿಸಿದೆ.
ಅಪಘಾತ ಬಗ್ಗೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.






