ರೈತಸಂಘ ಮಂಜೇಶ್ವರ ಏರಿಯಾ ಸಮಿತಿಯಿಂದ ಬಾಯಾರು ಪದವುನಲ್ಲಿ ಪ್ರತಿಭಟನಾ ಸಭೆ

ಪೈವಳಿಕೆ: ರಸಗೊಬ್ಬರದ ಬೆಲೆಯೇರಿಸಿದ ಕೇಂದ್ರ ಸರಕಾರದ ರೈತದ್ರೋಹಿ ತೀರ್ಮಾನಕ್ಕೆದುರಾಗಿ ಬಾಯಾರು ಪದವುನಲ್ಲಿ ರೈತಸಂಘದ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನಾ ಸಭೆಯನ್ನು ರೈತಸಂಘದ ರಾಜ್ಯಸಮಿತಿ ಸದಸ್ಯರಾದ ಕೆ. ಆರ್ ಜಯಾನಂದ ಉದ್ಘಾಟಿಸಿದರು. ಚಂದ್ರಹಾಸ ಶೆಟ್ಟಿ ಮಾಸ್ಟರ್ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು. ರೈತಸಂಘ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಸಾಮಾನಿ, ಪುರುಷೋತ್ತಮ ಬಿ, ಶ್ಯಾಮ್ ಭಟ್ ಮಾಸ್ಟರ್, ವಿನಯ್ ಕುಮಾರ್ ಬಾಯಾರ್, ಚಂದ್ರ ನಾಯಕ್, ಹುಸೈನ್ ಮಾಸ್ತರ್, ಕರುಣಾಕರ ಶೆಟ್ಟಿ ಭಾಗವಹಿಸಿದರು.

RELATED NEWS

You cannot copy contents of this page