ಪೈವಳಿಕೆಯಲ್ಲಿ ರಾಜೀವ್ ಗಾಂಧಿ ಸಂಸ್ಮರಣೆ

ಪೈವಳಿಕೆ: ಮಾಜಿ ಪ್ರಧಾನಿ, ಇಂಡಿಯನ್ ನೇಶನಲ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ದಿವಂಗತ ರಾಜೀವ್ ಗಾಂಧಿಯವರ ೩೬ನೇ ಪುಣ್ಯತಿಥಿಯನ್ನು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಿಸಲಾಯಿತು. ಮಂಡಲ ಅಧ್ಯಕ್ಷÀ ವಸಂತ ಕುಮಾರ್ ಉದ್ಘಾಟಿಸಿದರು. ಉಪಾಧ್ಯಕ್ಷ ಚನಿಯಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೀವ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ನಾರಾಯಣ ಏದಾರ್, ಸಚ್ಚಿದಾನಂದ ರೈ, ಗಂಗಾಧರ ನಾಯಕ್, ಎಡ್ವರ್ಡ್ ಡಿ ಸೋಜ, ಅಬ್ದುಲ್ಲ ಶಾ ಉಪಸ್ಥಿತರಿದ್ದರು. ಶಿವರಾಮ ಶೆಟ್ಟಿ ಸ್ವಾಗತಿಸಿ, ರಸಾಕ್ ಪಟ್ಲ ವಂದಿಸಿದರು.

RELATED NEWS

You cannot copy contents of this page