ಮಾಜಿ ಸಂಸದ ಎಂ. ರಾಮಣ್ಣ ರೈ ಸಹೋದರಿ ನಿಧನ

ಕಾಸರಗೋಡು: ಕಾಸರಗೋಡಿನ ಮಾಜಿ ಸಂಸದ ಎಂ. ರಾಮಣ್ಣ ರೈಯವರ ಸಹೋದರಿ, ಕುಂಬ್ಡಾಜೆ ಪಂಚಾಯತ್‌ನ ಮಾಜಿ ಸದಸ್ಯೆ, ಪುತ್ರಕಳದ ದಿ| ರಾಘವ ರೈಯವರ ಪತ್ನಿ ಇಂದಿರಾ ರೈ ಮಾಯಿಪ್ಪಾಡಿ ಗುತ್ತು (83) ಇಂದು ಬೆಳಿಗ್ಗೆ ನಿಧನ ಹೊಂದಿದರು. ಮೃತರು ಮಕ್ಕಳಾದ  ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ, ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್‌ನ ನಿವೃತ್ತ ಮೆನೇಜರ್ ಎಂ. ಅಶೋಕ ರೈ, ಸಂತೋಷ್ ರೈ, ಜಯಶ್ರೀ ಆಳ್ವ, ಅಳಿಯ ಸುರೇಂದ್ರ ಆಳ್ವ ಬಾಲುಶ್ಶೇರಿ, ಸೊಸೆಯಂದಿರಾದ ಶ್ರೀಲತಾ ಕೆ (ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಅಧ್ಯಾಪಿಕೆ), ಚಿತ್ರಕಲಾ, ಪ್ರವೀಣ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಇಂದು ಅಪರಾಹ್ನ 3 ಗಂಟೆ ವರೆಗೆ ಕಾಸರಗೋಡು ಕೋಟೆಕಣಿಯಲ್ಲಿರುವ ಪುತ್ರ ಅಶೋಕ ರೈಯವರ ಮನೆಯಲ್ಲಿ ಅಂತಿಮ ದರ್ಶನಕ್ಕಿರಿಸಲಾಗುವುದು. ಬಳಿಕ ಅಂತ್ಯ ಸಂಸ್ಕಾರ ಇಂದು ಸಂಜೆ ವಿಶಾಲಾಕ್ಷ ಪುತ್ರಕಳರ ಕುದ್ರೆಪ್ಪಾಡಿಯ ಲ್ಲಿರುವ ನಿವಾಸ ಬಳಿ ನಡೆಯಲಿದೆ.

RELATED NEWS

You cannot copy contents of this page