ಪುತ್ತಿಗೆಯಲ್ಲಿ ನಾಟಿ ಸಂತೆ, ಕೃಷಿಕರ ಸಂಗಮ

ಪುತ್ತಿಗೆ: ಪಂಚಾಯತ್ ಹಾಗೂ ಕೃಷಿ ಇಲಾಖೆ ಯಿಂದ ಜಂಟಿಯಾಗಿ ಕೃಷಿ ಭವನ ಪರಿಸರದಲ್ಲಿ ನಾಟಿ ಕೆಲಸ ಸಂತೆ ಹಾಗೂ ಕೃಷಿಕರ ಸಂಗಮ ನಡೆಲಾಗಿದೆ. ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷ ಇ.ಕೆ. ಮುಹಮ್ಮದ್ ಕುಂಞಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಫಿದಾ ಊಜಂಪದವು ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಸಕೀನಾ ಶರೀಫ್, ಬ್ಲೋಕ್ ಸದಸ್ಯ ಜುನೈದ್ ಉರ್ಮಿ, ವಾರ್ಡ್ ಪ್ರತಿನಿಧಿಗಳಾದ ಎಸ್.ಎ. ಅಬ್ದುಲ್ಲ, ಬಾಲಕೃಷ್ಣ ರೈ, ಶಿವಪ್ಪ ರೈ, ಲಕ್ಷ್ಮಿ ವಿ. ಭಟ್, ಹಮೀದ್ ಬಾಡೂರು, ಜಯಂತಿ, ಪ್ರಗತಿಪರ ಕೃಷಿಕ ಶಿವಾನಂದ ಶುಭ ಕೋರಿದರು. ಕೃಷಿ ಅಧಿಕಾರಿ ದಿನೇಶ್ ಸ್ವಾಗತಿಸಿದರು. ಕೃಷಿಕರ ಉತ್ಪನ್ನಗಳು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ಕೃಷಿಕ ಫ್ರಾನ್ಸಿಸ್ ಬಾಡೂರು ೨೦೦ರಷ್ಟು ಡ್ರಾಗನ್ ಫ್ರೂಟ್ ಕಟ್ಟಿಂಗ್ಸ್ ಉಚಿತವಾಗಿ ವಿತರಿಸಿದರು.

You cannot copy contents of this page