ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿಗೆ ಚಾಲನೆ, ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಮಂಗಲ್ಪಾಡಿ ಪರಂಕಿಲ ಏಕಾಹ ಭಜನಾ ಮಂದಿರದ ಎರಡನೇ ಹಂತದ ಕಾಮಗಾರಿ ಚಾಲನೆಯ ಪೂರ್ವಭಾವಿ ವಿಶೇಷ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ ಶ್ರೀಧರ ಭಟ್ ಕಾಮಗಾರಿಗೆ ಚಾಲನೆ ನೀಡಿ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು, ಮಾಜಿ ವಿಧಾನ ಪರಿಸದ್ ಸದಸ್ಯರಾದ ಮೋನಪ್ಪ ಭಂಡಾರಿ, ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೃಷ್ಣ. ಪಿ.ಬಂದ್ಯೋಡು, ಲಿಂಗಪ್ಪ ಶೆಟ್ಟಿಗಾರ್, ಪ್ರಭಾಕರ ಶೆಣೈ, ಶ್ರೀಧರ ಶೆಟ್ಟಿ, ಬಾಲಕೃಷ್ಣ ಅಂಬಾರ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಧರ್ ಶೆಟ್ಟಿ ಪರಂಕಿಲ ಸ್ವಾಗತಿಸಿ ಸುರೇಶ್ ಶೆಟ್ಟಿ ಪರಂಕಿಲ ವಂದಿಸಿದರು. ನೂತನ ಸಮಿತಿಗೆ ಪದಾಧಿಕಾರಿಗಳಾಗಿ ಗೌರವ ಮಾರ್ಗದರ್ಶಕರಾಗಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಸಲಹೆಗಾರರಾಗಿ ಮೋನಪ್ಪ ಭಂಡಾರಿ, ವೀರಪ್ಪ ಅಂಬಾರ್, ಸುರೇಶ್ ಶೆಟ್ಟಿ ಪರಂಕಿಲ, ಸುಬ್ರಾಯ ಹೇರಳ, ಪ್ರೇಮ್ ಕುಮಾರ್ ಐಲ, ಮೋಹನ್ ದಾಸ್ ಐಲ, ಶಂಕರ್ ಶೇರಿಗಾರ್ ಪರಂಕಿಲ, ಹರೀನಾಥ ಭಂಡಾರಿ ಮುಳಿಂಜ, ಗೌರವಾಧ್ಯಕ್ಷರಾಗಿ ಸಂಜೀವ ಶೆಟ್ಟಿ ತಿಂಬರ, ಅಧ್ಯಕ್ಷರಾಗಿ ವಿಜಯಕುಮಾರ್ ರೈ ಪರಂಕಿಲ, ಉಪಾಧ್ಯಕ್ಷರಾಗಿ ರಾಘವ ಕೊಪ್ಪಳ, ಜಯಲಕ್ಷ್ಮಿ ಕಾರಂತ್, ವಸಂತಕುಮಾರ್ ಮಯ್ಯ, ಸುರೇಶ್ ಶೆಟ್ಟಿ ಕುಂಡಲ, ಚಂದ್ರಶೇಖರ (ಚರಣ್ )ಬಂದ್ಯೋಡು. ಜಯಂತಿ ಟಿ ಶೆಟ್ಟಿ ಬಂದಿಯೋಡು, ಪ್ರಧಾನ ಕಾರ್ಯದರ್ಶಿಯÁಗಿ ರಾಧಾಕೃಷ್ಣ ತುಂಗ, ಕಾರ್ಯದರ್ಶಿಗಳಾಗಿ ರಾಕೇಶ್ ಪರಂಕಿಲ, ಅಮಿತ್ ಪರಂಕಿಲ, ಪವನ್ ಮುಟ್ಟ, ರಾಮಚಂದ್ರ ಬಲ್ಲಾಳ್, ಸಾಕ್ಷಿ ಪಂಜ, ರಕ್ಷಿತ್ ರೈ ಪರಂಕಿಲ, ಚಂದ್ರಹಾಸ ಶೆಟ್ಟಿ ಪರಂಕಿಲ, ಲಕ್ಷ್ಮೀಶ ಶೆಟ್ಟಿಗಾರ್ ಪೋರಿಕೋಡು, ಖಜಾಂಜಿಯÁಗಿ ರಮೇಶ್ ಹೊಳ್ಳ ಪರಂಕಿಲ, ಲೆಕ್ಕ ಪರಿಶೋಧಕರಾಗಿ ಅಭಿಜಿತ್ ಪರಂಕಿಲ ಹಾಗೂ ಶ್ರೀ ಶಾರದಾ ಮಹಿಳಾ ಸಂಘ ಪರಂಕಿಲ ಇವರನ್ನು ಆಯ್ಕೆ ಮಾಡಲಾಯಿತು.

RELATED NEWS

You cannot copy contents of this page