ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ

ಬದಿಯಡ್ಕ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಬಿದ್ದು ಸಿಕ್ಕಿದ ಒಂದೂವರೆ ಪವನ್ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಾಂತರಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಕಿಳಿಂಗಾರು ನಿಡುಗಳದ ಕೂಲಿ ಕಾರ್ಮಿಕನಾದ ಮಹಾಲಿಂಗ ಎಂಬವರಿಗೆ ಕಿಳಿಂಗಾರು ರಸ್ತೆಯಲ್ಲಿ ಚಿನ್ನದ ಸರ ಬಿದ್ದು ಸಿಕ್ಕಿತ್ತು. ಕೂಡಲೇ ಅದರ ವಾರಸುದಾರರನ್ನು ಹುಡುಕಿದರೂ ಪತ್ತೆಹಚ್ಚಲಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನು ಮಹಾಲಿಂಗ ಬದಿಯಡ್ಕ ಪೊಲೀಸರಿಗೆ ಒಪ್ಪಿಸಿದ್ದರು. ಈ ಮಧ್ಯೆ ಚಿನ್ನಾಭರಣ ಕಳೆದುಹೋದ ಪೆರಿಯಡ್ಕದ ಮಹೇಶ್ ವಿವಿಧೆಡೆ ಹುಡುಕಿದರೂ ಪತ್ತೆಯಾU ದುದರಿಂದ ಈ ಬಗ್ಗೆ ದೂರು ನೀಡಲು ಬದಿಯಡ್ಕ ಪೊಲೀಸ್ ಠಾಣೆಗೆ ತೆರಳಿದ್ದರು.  ಈ ವೇಳೆ ಕಳೆದುಹೋದ ಚಿನ್ನಾಭರಣ ವನ್ನು  ವ್ಯಕ್ತಿ ಪೊಲೀಸ್ ಠಾಣೆಗೆ ತಲುಪಿಸಿದ ಬಗ್ಗೆ ತಿಳಿದುಬಂದಿದೆ. ಅನಂತರ ಮಹಾಲಿಂಗರನ್ನು ನಿನ್ನೆ ಪೊಲೀಸ್ ಠಾಣೆಗೆ ಕರೆಸಿ ಅವರ ಮೂಲಕ ಚಿನ್ನಾಭರಣವನ್ನು ಮಹೇಶ್‌ರಿಗೆ ಪೊಲೀಸರ ಉಪಸ್ಥಿತಿ ಯಲ್ಲಿ ಹಸ್ತಾಂತರಿಸಲಾಯಿತು. ಅಡವಿರಿಸಲೆಂದು ಕೊಂಡೊಯ್ಯುತ್ತಿದ್ದ ಚಿನ್ನಾಭರಣ ದಾರಿ ಮಧ್ಯೆ ಕಳೆದುಹೋಗಿರುವುದಾಗಿ ಮಹೇಶ್ ತಿಳಿಸಿದ್ದಾರೆ. ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ವಾರಸುದಾರರಿಗೆ ಹಸ್ತಾಂತರಿಸಿದ ಮಹಾಲಿಂಗರನ್ನು ಪೊಲೀಸರು ಹಾಗೂ ನಾಗರಿಕರು ಅಭಿನಂದಿಸಿದ್ದಾರೆ.

RELATED NEWS

You cannot copy contents of this page